Farooq Abdullah: ಒಂದು ತಿಂಗಳಲ್ಲಿ ಎರಡು ಬಾರಿ ನೋಟೀಸ್ ಕಳುಹಿಸಿದ್ದರೂ ಸಹ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಶ್ರೀನಗರದಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ವಿಚಾರಣೆಗೆ ತೆರಳಿಲ್ಲ.  ಕ್ರಿಕೆಟ್ ಸಂಸ್ಥೆ ಹಗರಣ ಪ್ರಕರಣದಲ್ಲಿ ಇಡಿ ಸಮನ್ಸ್ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಈ ಆಟಗಾರ ತಂಡದಲ್ಲಿಲ್ಲ, ನಿಮಗೆ ಸರಣಿ ಗೆಲ್ಲೋಕೆ ಇದೇ ಸುವರ್ಣವಕಾಶ” –ಸ್ಟುವರ್ಟ್ ಬ್ರಾಡ್


“ಇಡಿ ಕಚೇರಿಗೆ ಹೋಗುತ್ತೀರಾ?” ಎಂದು ಫಾರೂಕ್ ಅಬ್ದುಲ್ಲಾ ಅವರನ್ನು ಕೇಳಿದಾಗ, “ನಾನು ಜಮ್ಮುವಿನಲ್ಲಿ ಇದ್ದೇನೆ, ಹೇಗೆ ಹೋಗುತ್ತೇನೆ, ನಾಳೆ ಶ್ರೀನಗರಕ್ಕೆ ಬರುತ್ತೇನೆ. ನಾನು ಅವನ ಮುಂದೆ ತಲೆ ಬಾಗಬೇಕೆಂದು ಬಯಸುತ್ತಿದ್ದಾನೆ. ಆದರೆ ಅದು ಸಾಧ್ಯವಿಲ್ಲ, ಫಾರೂಕ್ ಅಬ್ದುಲ್ಲಾ ಅಲ್ಲಾನ ಮುಂದೆ ಮಾತ್ರ ತಲೆಬಾಗುತ್ತಾನೆ” ಎಂದು ಹೇಳಿದ್ದಾರೆ.


ಸೋಮವಾರ (ಫೆಬ್ರವರಿ 12) ಸಂಜೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ​​(ಜೆಕೆಸಿಎ) ಯಲ್ಲಿನ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಎನ್‌’ಸಿ ಅಧ್ಯಕ್ಷರನ್ನು ವಿಚಾರಣೆಗೆ ಕರೆದಿತ್ತು. ಅದಕ್ಕೂ ಮೊದಲು ಅಂದರೆ ಜನವರಿ 11, 2024 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಕಳುಹಿಸಿತ್ತು. ಆದರೆ ಅಬ್ದುಲ್ಲಾ ಈ ಎರಡೂ ನೋಟಿಸ್’ಗಳಿಗೂ ಕ್ಯಾರೆ ಅಂದಿಲ್ಲ.


ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಚಾರ್ಜ್ ಶೀಟ್ ಸಲ್ಲಿಸಿರುವ ಜಾರಿ ನಿರ್ದೇಶನಾಲಯ ಅಬ್ದುಲ್ಲಾ ಅವರನ್ನು ಹಲವು ಬಾರಿ ವಿಚಾರಣೆ ನಡೆಸಿತ್ತು. 2019ರಲ್ಲಿ ಇದೇ ಪ್ರಕರಣದಲ್ಲಿ ಫಾರೂಕ್ ಅವರ ಹೇಳಿಕೆಯನ್ನೂ ದಾಖಲಿಸಿದ್ದರು.


ಇದನ್ನೂ ಓದಿ: ಅಂದು ವಿರಾಟ್ ಮೆನೇಜರ್… ಇಂದು ಈ ಕ್ರಿಕೆಟಿಗನ ಮುದ್ದಿನ ಮಡದಿ: 5 ಮಿಲಿಯನ್’ಗೂ ಅಧಿಕ ಸಂಪತ್ತಿನ ಒಡತಿ ಈ ಬಾಲಕಿ ಯಾರೆಂದು ಗೆಸ್ ಮಾಡಿ


ಈ ಪ್ರಕರಣವು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಸೇರಿದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ವಿಚಾರವನ್ನು ಒಳಗೊಂಡಿದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ