ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕರ್ ಮೈತ್ರಿಕೂಟವು ಬಿಜೆಪಿಗಿಂತ ಭಾರಿ ಮುನ್ನಡೆ ಸಾಧಿಸಿದೆ.


COMMERCIAL BREAK
SCROLL TO CONTINUE READING

ಕಾಶ್ಮೀರದಲ್ಲಿ 370 ನೇ ವಿಧಿ ಪುನಃಸ್ಥಾಪನೆಗಾಗಿ ಒಂದಾದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ


ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಈಗ ಗುಪ್ಕರ್ ಬಿಜೆಪಿಗಿಂತಲೂ ಹೆಚ್ಚಿನ ಮುನ್ನಡೆಯನ್ನು ಕಾಯ್ದುಕೊಂಡಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಕಾಶ್ಮೀರ ಭಾಗದಲ್ಲಿ ಪ್ರಾದೇಶಿಕ ಪಕ್ಷಗಳು ಮುನ್ನಡೆ ಸಾಧಿಸಿದರೆ, ಜಮ್ಮು ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.


ಫಾರೂಕ್ ಅಬ್ದುಲ್ಲಾ 11.86 ಕೋಟಿ ರೂ ಮೌಲ್ಯದ ಆಸ್ತಿ ಇಡಿ ವಶಕ್ಕೆ


ಇತ್ತೀಚಿನ ಮುನ್ನಡೆಗಳಲ್ಲಿ, ಗುಪ್ಕರ್ ಮೈತ್ರಿ - ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮೆಹಬೂಬಾ ಮುಫ್ತಿಯ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸೇರಿದಂತೆ ಏಳು ಮುಖ್ಯವಾಹಿನಿಯ ಜೆ & ಕೆ ಆಧಾರಿತ ಪಕ್ಷಗಳ ಗುಂಪು 108 ಸ್ಥಾನಗಳಲ್ಲಿ ಮುಂದಿದೆ; 60 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 22 ರಲ್ಲಿ ಕಾಂಗ್ರೆಸ್ ಮುಂದಿದೆ.ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ 57 ಸ್ಥಾನಗಳಲ್ಲಿ ಮುಂದಿದ್ದರೆ, ಗುಪ್ಕರ್ ಮೈತ್ರಿ 37 ರಲ್ಲಿ ಜಯಗಳಿಸುತ್ತಿದೆ.ಕಾಶ್ಮೀರದಲ್ಲಿ ಪ್ರಾದೇಶಿಕ ಗುಂಪು ಬೃಹತ್ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.ಬಿಜೆಪಿ ಮೂರು ಸ್ಥಾನದಲ್ಲಿದೆ.


ನಾವು ಬಿಜೆಪಿ ವಿರೋಧಿ ಹೊರತು ದೇಶ ವಿರೋಧಿಯಲ್ಲ- ಫಾರೂಕ್ ಅಬ್ದುಲ್ಲಾ


ಈಗ 280 ಸ್ಥಾನಗಳಿಗೆ ಮತ ಎಣಿಕೆಯನ್ನು ಮಾಡಲಾಗುತ್ತಿದೆ.ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಅಥವಾ ಇವಿಎಂಗಳಿಗೆ ಬದಲಾಗಿ ಮತಪತ್ರಗಳನ್ನು ಚುನಾವಣೆಯಲ್ಲಿ ಬಳಸಿದ್ದರಿಂದಾಗಿ ಎಣಿಕೆ ಪ್ರಕ್ರಿಯೆ ಸ್ವಲ್ಪ ವಿಳಂಭವಾಗಲಿದೆ. 25 ದಿನಗಳ ಅವಧಿಯಲ್ಲಿ ಎಂಟು ಹಂತಗಳಲ್ಲಿ ನಡೆದ ಮತದಾನ ಡಿಸೆಂಬರ್ 19 ಕ್ಕೆ ಕೊನೆಗೊಂಡಿತು.