ನವದೆಹಲಿ: ಸತತ 11 ಗಂಟೆಗಳ ಹೆಚ್ಚಿನ ಕಾರ್ಯಾಚರಣೆ ಬಳಿಕ ಪೊಲೀಸರು ಎನ್‌ಕೌಂಟರ್‌ನಲ್ಲಿ ಆರೋಪಿಗಳನ್ನು ಹತ್ಯೆಗೈದ ನಂತರ ಉತ್ತರ ಪ್ರದೇಶದ ಫಾರೂಖಾಬಾದ್‌ನಲ್ಲಿ  ಮನೆಯೊಳಗೆ ಒತ್ತೆಯಾಳುಗಳಾಗಿ ಬಂಧಿಸಲ್ಪಟ್ಟಿದ್ದ 23 ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಫರೂಖಾಬಾದ್‌ನ ಮೊಹಮ್ಮದಾಬಾದ್ ಪಟ್ಟಣದ ಕಾರ್ತಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸುಭಾಷ್ ಬಾಥಮ್ ಎಂಬ ವ್ಯಕ್ತಿ ಜಾಮೀನಿನ ಮೇಲೆ ಹೊರ ಬಂದಿದ್ದನು. ಆತ ತನ್ನ ಮಗಳ ಜನ್ಮದಿನದ ನೆಪದಲ್ಲಿ ಮಕ್ಕಳನ್ನು ತನ್ನ ಮನೆಗೆ ಆಹ್ವಾನಿಸಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.


ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಳಿಕ ಯಾವುದಾದರು ಬೇಡಿಕೆ ಇಟ್ಟಿದ್ದನೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಆದರೆ ಅವರು ಪೊಲೀಸರು ಮತ್ತು ಗ್ರಾಮಸ್ಥರ ಮೇಲೆ ಹಲವಾರು ಬಾರಿ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಮತ್ತು ಕೆಲವು ಸ್ಥಳೀಯರನ್ನು ಗಾಯಗೊಂಡಿದ್ದಾರೆ. ಮಕ್ಕಳನ್ನು ರಕ್ಷಿಸಲು ಜನರು ತಮ್ಮ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಅವರು ಕಡಿಮೆ ತೀವ್ರತೆಯ ಕೈ ಗ್ರೆನೇಡ್ ಅನ್ನು ಸಹ ಹಾರಿಸಿದ್ದ ಎಂದು ಹೇಳಲಾಗಿದೆ.


ಎನ್‌ಕೌಂಟರ್‌ನಲ್ಲಿ ಆರೋಪಿಯ ಪತ್ನಿ ಕೂಡ ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪಿವಿ ರಾಮಶಾಸ್ತ್ರಿ ದೃಢಪಡಿಸಿದ್ದಾರೆ.


ಉತ್ತರ ಪ್ರದೇಶ: 20ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳಾಗಿರಿಸಿ ಪೋಲೀಸರ ಮೇಲೆ ಕಚ್ಚಾ ಬಾಂಬ್ ತೂರಿದ ಭೂಪ


ಘಟನೆ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ರಾಮಶಾಸ್ತ್ರಿ, ''ಕೊಲೆ ಪ್ರಕರಣದಲ್ಲಿ ಆ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಮತ್ತು ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹುಟ್ಟುಹಬ್ಬದ ಸಂತೋಷಕೂಟದ ನೆಪದಲ್ಲಿ ಅವರು ಮಕ್ಕಳನ್ನು ಕರೆದು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದರು. ಆ ಮನೆಯ ಸುತ್ತ ಮುತ್ತಲೂ ಡಿಎಂ, ಎಸ್‌ಎಸ್‌ಪಿ ಮತ್ತು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ".


ಅಲ್ಲದೆ ಸ್ಥಳದಲ್ಲಿ ಯುಪಿ ಪೊಲೀಸ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು, ಯುಪಿ ಎಟಿಎಸ್ ಅನ್ನು ಫರೂಕಾಬಾದ್‌ನಲ್ಲಿಯೂ ನಿಯೋಜಿಸಲಾಗಿತ್ತು. ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಯುಪಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಕ್ಕಳನ್ನು ಬೇಗನೆ ರಕ್ಷಿಸುವಂತೆ ಸೂಚನೆ ನೀಡಿದ್ದರು.