ನವದೆಹಲಿ: ಪ್ರೈವೇಟ್ ಕಾರ್ ಆಗಲಿ ಅಥವಾ ಟ್ಯಾಕ್ಸಿ, ವಾಹನ ಚಲಾಯಿಸಬೇಕು ಎಂದರೆ FASTag ಹೊಂದುವುದು ಆವಶ್ಯಕ. FASTag ಇಲ್ಲದೆ ಹೋದರೆ ನಿಮ್ಮ ವಾಹನ ಟೋಲ್ ಗೆಟ್ ನಿಂದ ಹೊರಬರುವುದು ಕಷ್ಟ...ಇಲ್ಲದೆ ಹೋದ್ರೆ? ಅಂತಿರಾ... FASTag ಇಲ್ಲದಿದ್ದರೂ ಕೂಡ ಇನ್ಮುಂದೆ ಚಿಂತೆ ಇಲ್ಲ. ಹೀಗಂತ FASTag ಪಡೆಯುವುದನ್ನು ನಿಲ್ಲಿಸಬೇಡಿ. FASTag ಕೂಡ ಆವಶ್ಯಕ. ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ವಾಹನಗಳ ಮೇಲೆ FASTag ಕಡ್ಡಾಯಗೊಳಿಸಿದೆ. FASTag ಇಲ್ಲದೆ ಇರುವವರ ಬಳಿ ಸರ್ಕಾರ ದುಪ್ಪಟ್ಟು ಟ್ಯಾಕ್ಸ್ ವಸೂಲಿ ಮಾಡಲಿದೆ ಎಂದು ಕೂಡ ಹೇಳಲಾಗಿತ್ತು. ಆದರೆ ಎಂತಮಧ್ಯೆ ಉತ್ತಮ ಅಪ್ಡೇಟ್ ಕೇಳಿಬಂದಿದ್ದು, ದುಪ್ಪಟ್ಟು ಟ್ಯಾಕ್ಸ್ ವಸೂಲಿ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ. ಇದರ ಹಿಂದೆ ದೊಡ್ಡ ಕಾರಣವೊಂದು ಅಡಗಿದೆ ಎನ್ನಲಾಗಿದೆ. ಬನ್ನಿ ಅ ಕಾರಣ ಏನೆಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಜನವರಿಯಿಂದ FASTag ಕಡ್ಡಾಯ, ಅದನ್ನು ಎಲ್ಲಿ? ಹೇಗೆ ಪಡೆಯಬೇಕೆಂದು ತಿಳಿಯಿರಿ


ಜನವರಿ 1,2021ರಿಂದ ಹೊಸ ಸೇವೆ ಆರಂಭ
ಜನವರಿ 1, 2021ರಲ್ಲಿ ಎಲ್ಲಾ ಟೋಲ್ ಪ್ಲಾಜಾದ ಎಲ್ಲಾ ಲೇನ್ ಗಳು FASTag ಲೇನ್ ಗಳಾಗಿ ಬದಲಾಗಲಿವೆ. ಜನವರಿ 1 ರಿಂದ ಯಾವುದೇ ಟೋಲ್ ಪ್ಲಾಜಾನಲ್ಲಿ ನಗದು ವ್ಯವಹಾರ ನಡೆಯುವುದಿಲ್ಲ. ಇಂತಹುದರಲ್ಲಿ ನಿಮ್ಮ ವಾಹನಕ್ಕೆ FASTag ಇಲ್ಲ ಎಂದಾದಲ್ಲಿ ಟೋಲ್ ಪ್ಲಾಜಾನಿಂದ ನಿಮ್ಮ ವಾಹನ ಪಾಸ್ ಆಗಲು ಬಿಡುವುದಿಲ್ಲ. ಒಂದು ವೇಳೆ ವಾಹನವನ್ನು ಅಲ್ಲಿಂದ ಕದಲಿಸಬೇಕು ಎಂದರೆ ಒಂದು ವಿಶೇಷ ಸೇವೆಯನ್ನು ನೀವು ಬಳಸಬೇಕಾಗಲಿದೆ. ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾ(NHAI)  ಟೋಲ್ ಪ್ಲಾಜಾ ಮೇಲೆ ಪ್ರೀ ಪೇಡ್ ಟಚ್ ಅಂಡ್ ಗೋ ಕಾರ್ಡ್ ಪ್ರಸ್ತುತಪಡಿಸಲಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟನೆಯನ್ನು ತಡೆಯಲು ಜನವರಿ 1 ರಿಂದ ಎಲ್ಲ ಹೈಬ್ರಿಡ್ ಲೇನ್ ಗಳ ಮೇಲೆ ಪ್ರೀ ಪೇಡ್ ಕಾರ್ಡ್ ಸೌಕರ್ಯ ಆರಂಭಿಸಲಾಗುತ್ತಿದೆ.


ಇದನ್ನು ಓದಿ- ಉಚಿತವಾಗಿ FASTag ಬೇಕೇ! ಇನ್ನು 4 ದಿನ ಮಾತ್ರ ಈ ಅವಕಾಶ


ನಗದು ವ್ಯವಹಾರ ಸಂಪೂರ್ಣ ಬಂದ್
ಜನವರಿ 1 ರಿಂದ ಯಾವುದೇ ಟೋಲ್ ಪ್ಲಾಜಾದಲ್ಲಿ ನಗದು ವಹಿವಾಟು ಇರುವುದಿಲ್ಲ. ಈ ಸೌಲಭ್ಯದಿಂದ ಕ್ರಮೇಣ ಎಲ್ಲಾ ಲೇನ್‌ಗಳನ್ನು ಮೀಸಲು ಫಾಸ್ಟ್ಯಾಗ್ ಲೇನ್‌ಗಳಾಗಿ ಪರಿವರ್ತಿಸುತ್ತದೆ. ಫಾಸ್ಟಾಗ್ ಹೊಂದಿರದವರು ದಂಡದ ಮೊತ್ತಕ್ಕಿಂತ ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಆದರೆ, ಈ ಪ್ರೀ-ಪೇಡ್  ಕಾರ್ಡ್‌ಗಳು ನಗದು ವಹಿವಾಟಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ.


ಇದನ್ನು ಓದಿ- ನಿಮ್ಮ FASTag ಮಾಹಿತಿ ತಿಳಿಯಲು ಈ ಒಂದು ಕೆಲಸ ಸಾಕು!


ಫಾಸ್ಟ್ ಟ್ಯಾಗ್ ಇಲ್ಲ ಎಂದರೆ ಪ್ರೀಪೇಡ್ ಕಾರ್ಡ್ ಖರೀದಿಸಿ
ಒಂದು ವೇಳೆ ನಿಮ್ಮ ವಾಹನಕ್ಕೆ FASTag ಇಲ್ಲ ಎಂದಾದರೆ, ನೀವು ಟೋಲ್ ಪ್ಲಾಜಾದಲ್ಲಿ ಪಾಯಿಂಟ್-ಆಫ್-ಸೇಲ್ಸ್ (ಪಿಒಎಸ್) ನಲ್ಲಿ ಈ ಪ್ರಿ-ಪೇಡ್  ಕಾರ್ಡ್‌ಗಳನ್ನು ಖರೀದಿಸಬಹುದು. ಫಾಸ್ಟ್ಯಾಗ್ ಬದಲಿಗೆ ಈ ಕಾರ್ಡ್‌ಗಳನ್ನು ಬಳಸುವಾಗ ಎರಡು ಪಟ್ಟು ಟೋಲ್ ವಸೂಲಿ ಮಾಡಲಾಗುವುದಿಲ್ಲ. ಒಳ್ಳೆಯದು ಎಂದರೆ ಫಾಸ್ಟ್ಯಾಗ್ ಇದ್ದರೂ ಸಹ ನೀವು ಈ ಪೂರ್ವ-ಪಾವತಿಸಿದ ಕಾರ್ಡ್ ಅನ್ನು ಬಳಸಬಹುದು. ಫಾಸ್ಟ್ಯಾಗ್ ಪೂರ್ವ-ಪಾವತಿಸಿದ ಕಾರ್ಡ್ ಸೇವೆಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದರೂ ಅಥವಾ ವಿಫಲವಾದರೂ ಅಥವಾ ರೀಚಾರ್ಜ್ ಮಾಡಲು ಮರೆತಿದ್ದರೂ ಸಹ ಪ್ರೀ ಪೇಡ್ ಕಾರ್ಡ್ ಲಾಭವನ್ನು ನೀವು ಪಡೆಯಬಹುದು.


ಇದನ್ನು ಓದಿ- ನಿಮ್ಮ ವಾಹನಕ್ಕೆ FASTag ಅಳವಡಿಸಲು ಮರೆತು ಹೋದ್ರಾ? ಈ ಸುದ್ದಿ ತಪ್ಪದೆ ಓದಿ


ಟೋಲ್ ಪ್ಲಾಜಾಗಳ ಮೇಲೆ ಎರಡು POS ಇರಲಿವೆ
ರಾಷ್ಟ್ರೀಯ ಮಹಾಮಾರ್ಗ ಪ್ರಭಂಧಕ ಕಂಪನಿ ಲಿಮಿಟೆಡ್ (IHMCL) ಟೆಂಡರ್ ಕರೆದಿದೆ. ಶೀಘ್ರವೆ ಈ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆಗಳು ನಡೆದಿವೆ. ಪ್ರೀ-ಪೇಡ್ ಕಾರ್ಡ್ ಗಳ ಖರೀದಿ ಹಾಗೂ ರಿಚಾರ್ಜ್ ಗೆ ಪ್ರತಿಯೊಂದು ಟೋಲ್ ಪ್ಲಾಜಾ ಗಳಲ್ಲಿ ಎರಡು POSಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರೀಪೇಡ್ ಕಾರ್ಡ್ ಗಳನ್ನು ಖರೀದಿಸಿದ ಬಳಿಕ ಗ್ರಾಹಕರು ಅವುಗಳನ್ನು ನೆಟ್ ಬ್ಯಾಂಕಿಂಗ್ ಅಥವಾ POSಗಳ ಮೂಲಕ ರಿಚಾರ್ಜ್ ಮಾಡಿಸಬಹುದಾಗಿದೆ. ಪ್ರಸ್ತುತ ಪ್ರತಿಯೊಂದು ಟೋಲ್ ಪ್ಲಾಜಾಗಳಲ್ಲಿ ನಗದು ವ್ಯವಹಾರಕ್ಕಾಗಿ ಎರಡು ಲೇನ್ ಗಳನ್ನು ಮೀಸಲಿರಿಸಲಾಗಿದೆ. ಆದರೆ, ಜನವರಿ 1 ರಿಂದ ಈ ಎಲ್ಲ ಲೇನ್ ಗಳನ್ನು ಬಂದ್ ಮಾಡಲಾಗುತ್ತಿದೆ.