Trending News: 23ರ ಯುವತಿಯನ್ನು ಮದುವೆಯಾದ 6 ಮಕ್ಕಳ ತಂದೆ, 65ರ ವೃದ್ಧ! ಇವರ ಲವ್ ಸ್ಟೋರಿ ಬಲುರೋಚಕ
Trending Marriage News: ಈ ವರನ ಹೆಸರು ನಕ್ಕದ್ ಯಾದವ್. ಈ ವೃದ್ಧನಿಗೆ ಆರು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಇನ್ನು ಯಾದವ್ ಅವರ ಪತ್ನಿಯ ಮರಣದ ನಂತರ ಒಂಟಿತನದಿಂದ ಜೀವನ ನಡೆಸುತ್ತಿದ್ದರು. ತನ್ನ ಎಲ್ಲಾ ಹೆಣ್ಣುಮಕ್ಕಳು ತಮ್ಮ ಅತ್ತೆಯ ಮನೆಯಲ್ಲಿ ತಮ್ಮ ಗಂಡ ಮತ್ತು ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Trending Marriage News: ಅಯೋಧ್ಯೆ: ಇಲ್ಲಿನ ಮಾವಾಯಿ ಬ್ಲಾಕ್‌ನಲ್ಲಿರುವ ಮಾ ಕಾಮಾಖ್ಯ ಧಾಮ ದೇವಸ್ಥಾನದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ತನಗಿಂತ 42 ವರ್ಷ ಕಿರಿಯ ಅಂದರೆ 23 ವರ್ಷದ ಮಹಿಳೆಯನ್ನು ವಿವಾಹವಾಗಿದ್ದಾರೆ. ಈ ಮದುವೆ ಭಾನುವಾರದಂದು ನಡೆದಿದೆ.
ಇದನ್ನೂ ಓದಿ: ನಡ್ಡಾ ಮಗನ ರಿಸೆಪ್ಸನ್ ನಿಮಿತ್ತ ಬಿಜೆಪಿ ನಾಯಕರು ದೆಹಲಿಗೆ ಪ್ರಯಾಣ
ಈ ವರನ ಹೆಸರು ನಕ್ಕದ್ ಯಾದವ್. ಈ ವೃದ್ಧನಿಗೆ ಆರು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಇನ್ನು ಯಾದವ್ ಅವರ ಪತ್ನಿಯ ಮರಣದ ನಂತರ ಒಂಟಿತನದಿಂದ ಜೀವನ ನಡೆಸುತ್ತಿದ್ದರು. ತನ್ನ ಎಲ್ಲಾ ಹೆಣ್ಣುಮಕ್ಕಳು ತಮ್ಮ ಅತ್ತೆಯ ಮನೆಯಲ್ಲಿ ತಮ್ಮ ಗಂಡ ಮತ್ತು ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮದುವೆಯ ಸಂದರ್ಭದಲ್ಲಿ ಎರಡೂ ಕಡೆಯ ಕುಟುಂಬಸ್ಥರು ಉಪಸ್ಥಿತರಿದ್ದರು. ಮದುವೆಗೆ ಮೊದಲು ಮಹಿಳೆ ಮತ್ತು ಅವರ ಕುಟುಂಬ ಸದಸ್ಯರ ಒಪ್ಪಿಗೆಯನ್ನೂ ತೆಗೆದುಕೊಳ್ಳಲಾಗಿದೆ ಎಂದು ವರ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇನ್ನು ವಧು ನಂದಿನಿ ಅವರು ತಮ್ಮ ವರನೊಂದಿಗೆ ಸಂತೋಷವಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ವಯಸ್ಸಿನ ವ್ಯತ್ಯಾಸವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Viral Video: ಸಾವು ಹೀಗೂ ಬರುತ್ತೆ ನೋಡಿ, ಇಲ್ಲಿದೆ ಆಘಾತಕಾರಿ ವಿಡಿಯೋ!
ಇನ್ನು ಇತ್ತೀಚೆಗೆಯಷ್ಟೇ ಇಂತಹದ್ದೇ ಸುದ್ದಿಯೊಂದು ಎಲ್ಲೆಡೆ ವೈರಲ್ ಆಗಿತ್ತು. 63 ವರ್ಷದ ವೃದ್ಧ ಮಾವನನ್ನು ಸೊಸೆ ಮದುವೆಯಾಗಿದ್ದಳು. ಅದೂ ಕೂಡ ಪ್ರೀತಿಸಿ ಮದುವೆಯಾಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.