ನವದೆಹಲಿ: ಸಾಕು ಬೆಕ್ಕು ಕಚ್ಚಿ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಒಂದೇ ವಾರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಮತ್ತು ಅವರ ಮಗ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ ಸೆಪ್ಟೆಂಬರ್‌ ತಿಂಗಳಿನಲ್ಲಿ ರೇಬೀಸ್ ಸೋಂಕಿಗೆ ಒಳಗಾದ ನಾಯಿಯೊಂದು ಮೃತ ಶಿಕ್ಷಕರ ಸಾಕು ಬೆಕ್ಕಿಗೆ ಕಚ್ಚಿತ್ತು. ಬೆಕ್ಕಿನಲ್ಲಿ ರೇಬೀಸ್ ರೋಗಲಕ್ಷಣಗಳು ಕಂಡುಬಂದರೂ ಸಹ ಆತನ ಕುಟುಂಬಸ್ಥರು ನಿರ್ಲಕ್ಷಿಸಿದ್ದರು. ಮೊದಲು ಶಿಕ್ಷಕನಿಗೆ ನಂತರ ಅವರ 24ರ ಹರೆಯದ ಮಗನಿಗೆ ಬೆಕ್ಕು ಕಚ್ಚಿತ್ತು.  ಹೀಗಾಗಿ ರೇಬೀಸ್ ರೋಗದಿಂದ ಒಂದೇ ವಾರದಲ್ಲಿ ತಂದೆ-ಮಗ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: IAF Plane Crash : ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನ, ಇಬ್ಬರು ಪೈಲಟ್‌ಗಳು ಸಾವು


ಕುಟುಂಬಸ್ಥರ ಪ್ರಕಾರ, ಬೆಕ್ಕಿಗೆ ರೇಬೀಸ್ ರೋಗ ಇರುವುದು ತಿಳಿದಿರಲಿಲ್ಲ. ಮನೆಯಲ್ಲಿ ಬೆಕ್ಕು ಆಟವಾಡುತ್ತಾ ತಂದೆ ಮತ್ತು ಮಗ ಇಬ್ಬರಿಗೂ ಕಚ್ಚಿತ್ತು. ಆದರೆ ಬೆಕ್ಕು ಕಚ್ಚಿ ಮಾಡಿದ್ದ ಗಾಯಗಳಿಗೆ ಸಾಮಾನ್ಯ ಚಿಕಿತ್ಸೆಯನ್ನಷ್ಟೇ ತೆಗೆದುಕೊಂಡಿದ್ದರು. ಇದಲ್ಲದೆ ಆಂಟಿ ರೇಬೀಸ್ ಲಸಿಕೆ ಪಡೆಯುವ ಬದಲು, ಆಂಟಿಟೆಟನಸ್ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರಂತೆ.


ಕೆಲವೇ ದಿನಗಳಲ್ಲಿ ಬೆಕ್ಕು ಸಾವನ್ನಪ್ಪಿದ್ದರೂ ಮನೆಯವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನವೆಂಬರ್ 21ರಂದು ಕುಟುಂಬಸ್ಥರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೋಪಾಲ್‌ಗೆ ತೆರಳಿತ್ತು. ಅಲ್ಲಿ ಶಿಕ್ಷಕ ಮತ್ತು ಅವರ ಪುತ್ರನ ಆರೋಗ್ಯ ಹದಗೆಡಲು ಪ್ರಾರಂಭಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಮಾರ್ಸ್ ರೋವರ್ ನಿರ್ವಹಿಸಿದ ಭಾರತದ ಮೊದಲ ಮಹಿಳೆ: ಸ್ಪೂರ್ತಿದಾಯಕ ಪ್ರಯಾಣವನ್ನು ಹಂಚಿಕೊಂಡ ಅಕ್ಷತಾ ಕೃಷ್ಣಮೂರ್ತಿ!


ಶಿಕ್ಷಕರ ಮನೆಯ ನೆರೆಹೊರೆಯಲ್ಲಿ ರೇಬೀಸ್ ರೋಗದ ಭೀತಿ ಹರಡಿದ್ದರಿಂದ ಜನರು ಆತಂಕದಲ್ಲಿದ್ದಾರೆ. ಸೋಂಕು ತಗುಲಿದೆಯೇ ಇಲ್ಲವೋ ಎಂದು ದೃಢಪಡಿಸಿಕೊಳ್ಳಲು ಇತರ ಎಲ್ಲಾ ಕುಟುಂಬ ಸದಸ್ಯರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.