ನವದೆಹಲಿ: ಭಾರತದ ಖ್ಯಾತ ಔಷಧಿ ತಯಾರಕ ಕಂಪನಿ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತನ್ನ ಆಂಟಿವೈರಲ್ ಔಷಧಿಯಾಗಿರುವ ಫವಿಪಿರಾವೀರ್‌ನ ಬೆಲೆಯನ್ನು ಶೇಕಡಾ 27 ರಷ್ಟು ಕಡಿಮೆ ಮಾಡಿದೆ. ಈ ಔಷಧಿಯನ್ನು Fabiflu ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಕೊವಿಡ್ 19 ರೋಗದ ಸೌಮ್ಯ ಹಾಗೂ ಮಧ್ಯಮ ಲಕ್ಷಣ ಹೊಂದಿರುವ ರೋಗಿಗಳ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತದೆ. ಸದ್ಯ ಈ ಔಷಧಿಯ ಬೆಲೆಯಲ್ಲಿ ಶೇ. 27 ರಷ್ಟು ಇಳಿಕೆ ಮಾಡಲಾಗಿದ್ದು, ಪ್ರಸ್ತುತ ಔಷಧಿಯ ಬೆಲೆಯನ್ನೂ ಪ್ರತಿ ಮಾತ್ರೆಗೆ ರೂ.75 ನಿಗದಿಪಡಿಸಲಾಗಿದೆ. ಒಂದು ನಿಯಂತ್ರಕ ಫೈಲಿಂಗ್‌ನಲ್ಲಿ ಕಂಪನಿಯು ಈ ಘೋಷಣೆ ಮಾಡಿದೆ. ಗ್ಲೆನ್‌ಮಾರ್ಕ್ ಕಳೆದ ತಿಂಗಳು ಫ್ಯಾಬಿಫ್ಲು ಅನ್ನು ಪ್ರತಿ ಟ್ಯಾಬ್ಲೆಟ್‌ಗೆ 103 ರೂ.ನಂತೆ ಬಿಡುಗಡೆಗೊಳಿಸಿದ್ದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಉಚ್ಚ ಗುಣಮಟ್ಟದ ಈಲ್ದ್ ಹಾಗೂ ಉತ್ತಮ ಸ್ಕೇಲ್ ನಲ್ಲಿ ಸಿಕ್ಕ ಲಾಭದ ಹಿನ್ನೆಲೆ ಈ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕಂಪನಿ ತನ್ನ ಫೈಲಿಂಗ್ ನಲ್ಲಿ ತಿಳಿಸಿದೆ. ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್ಗ್ರಿಡಿಯಂಟ್ಸ್ (API) ಹಾಗೂ ಫಾರ್ಮುಲೆಶನ್ ಗಳು ಭಾರತದ ಗ್ಲೆನ್ ಮಾರ್ಕ್ ಫೆಸಿಲಿಟಿಗಳಲ್ಲಿ ಸಿದ್ದಪಡಿಸಲಾಗಿದೆ. ಇದರಿಂದ ಸಿಕ್ಕ ಲಾಭವನ್ನು ದೇಶದ ರೋಗಿಗಳಿಗೆ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.


API, ಕಂಪನಿಯ ಅಂಕಲೆಶ್ವರ್ ಪ್ಲಾಂಟ್ ನಲ್ಲಿ ಉತ್ಪಾದಿಸಲಾಗಿದ್ದು, ಫಾರ್ಮುಲೆಶನ್ ಬಿಡಾಡಿ ಪ್ಲಾಂಟ್ ನಲ್ಲಿ ಸಿದ್ಧಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಹಿರಿಯ ವೈಸ್ ಪ್ರೆಸಿಡೆಂಟ್ ಹಾಗೂ ಇಂದಿನ ಬಿಸಿನೆಸ್ ಮುಖ್ಯಸ್ಥ ಆಲೋಕ್ ಮಲಿಕ್, "ನಾವು Favipiravirನ ಇತರೆ ದೇಶಗಳಲ್ಲಿನ ಬೆಲೆಯ ಹೋಲಿಕೆಯಲ್ಲಿ ಭಾರತದಲ್ಲಿ FabiFlu ಬೆಲೆಯನ್ನು ಅತ್ಯಂಕ ಕಡಿಮೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ನಿಮ್ಮ ಆಂತರಿಕ ರಿಸರ್ಚ್ ನಲ್ಲಿ ಕಂಡು ಬಂದಿತ್ತು. ಬೆಲೆಯಲ್ಲಿ ಮಾಡಲಾಗಿರುವ ಈ ಇಳಿಕೆಯಿಂದ ದೇಶಾದ್ಯಂತ ಇರುವ ರೋಗಿಗಳಿಗೆ ಈ ಔಷಧಿ ಇನ್ನಷ್ಟು ಹತ್ತಿರವಾಗಲಿದೆ ಎಂಬ ಭರವಸೆ ಹೊಂದಿದ್ದೇವೆ" ಎಂದು ಹೇಳಿದ್ದಾರೆ.


ಫ್ಯಾಬಿಫ್ಲೂ ತಯಾರಿಕೆ ಮತ್ತು ಮಾರಾಟಕ್ಕಾಗಿ ಗ್ಲೆನ್‌ಮಾರ್ಕ್ ಜೂನ್ 20 ರಂದು ಭಾರತದ ಔಷಧಿ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ಪಡೆದಿತ್ತು. ಭಾರತದಲ್ಲಿ ಕೋವಿಡ್ 19 ರ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳಿಂದ ಸೋಂಕಿತ ಜನರ ಚಿಕಿತ್ಸೆಗಾಗಿಫಾವಿಪಿರವಿರ್ ಮೊದಲ ಅನುಮೋದಿತ ಒರಲ್ ಔಷಧಿಯಾಗಿದೆ. ದೇಶದಲ್ಲಿ ಕೋವಿಡ್ 19 ರ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳಿಂದ ಸೋಂಕಿತ ಜನರ ಮೇಲೆ ಫಾವಿಪಿರವಿರ್ (ಫ್ಯಾಬಿಫ್ಲೂ) ಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಕಂಪನಿಯು ಪೂರ್ಣಗೊಳಿಸಿದೆ. ಪ್ರಯೋಗ ಫಲಿತಾಂಶಗಳು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.