ನವದೆಹಲಿ: ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಫೆಬ್ರವರಿ 1 ರಂದು 4 ತಿಂಗಳ ಮಧ್ಯಂತರ ಬಜೆಟ್ ಮಂಡಿಸಲಾಗುವುದು. ಅಂತಹ ಸಂದರ್ಭದಲ್ಲಿ, ಇದನ್ನು ಮಧ್ಯಂತರ ಬಜೆಟ್ ಅಥವಾ ಸಾಮಾನ್ಯ ಬಜೆಟ್ ಎಂದು ಕರೆಯಬಹುದು. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಂಡಿಸಲಾಗುತ್ತಿರುವ ಬಜೆಟ್ ಇದಾಗಿರುವುದರಿಂದ ಪ್ರತಿಯೊಬ್ಬರಿಗೂ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳಿವೆ. ಈ ಮಧ್ಯಂತರ ಬಜೆಟ್​ನಲ್ಲಿ ಮೋದಿ ಸರ್ಕಾರ ನೌಕರರಿಗೆ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆಯಿದೆ. ಆದಾಯ ತೆರಿಗೆ ಮಿತಿ ದ್ವಿಗುಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದ್ದು, ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಮಿತಿಯನ್ನು ಸರ್ಕಾರ 5 ಲಕ್ಷ ರೂ. ಗೆ ಅಧಿಕಗೊಳಿಸಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಸದ್ಯ ಆದಾಯ ತೆರಿಗೆ ವಿನಾಯಿತಿಯ ಮಿತಿ ರೂ 2.5 ರೂ.


COMMERCIAL BREAK
SCROLL TO CONTINUE READING

ರೈತರ ನಿರೀಕ್ಷೆ:
ಇದಲ್ಲದೆ, ಸರ್ಕಾರವು ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸಲಿದೆ ಎನ್ನಲಾಗಿದೆ. ಬಜೆಟ್ ಗೂ ಮುನ್ನವೇ ನಾಲ್ಕು ರಾಜ್ಯಗಳ ರೈತರ 6680 ಕೋಟಿ ರೂ. ಪರಿಹಾರ ಪ್ಯಾಕೇಜ್ ಗೆ ಕೇಂದ್ರ ಸರಕಾರ ಅನುಮೋದಿನೆ ನೀಡಿದೆ. ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರು ಈ ಪರಿಹಾರ ಪ್ಯಾಕೇಜ್ ನ ಪ್ರಯೋಜನ ಪಡೆಯಲಿದ್ದಾರೆ. ಈ ರಾಜ್ಯಗಳಲ್ಲಿ ರೈತರು ಬರದಿಂದ ಬಳಲುತ್ತಿದ್ದು ಸರ್ಕಾರದ ನಿರ್ಧಾರವು ಅವರಿಗೆ ಹೆಚ್ಚಿನ ಪರಿಹಾರ ನೀಡುತ್ತದೆ. ಪರಿಹಾರ ಪ್ಯಾಕೇಜ್ ಅಡಿಯಲ್ಲಿ  ಆಂಧ್ರಪ್ರದೇಶಕ್ಕೆ 900 ಕೋಟಿ ರೂ., ಗುಜರಾತ್ಗೆ 130 ಕೋಟಿ ರೂ., ಮಹಾರಾಷ್ಟ್ರಕ್ಕೆ 4700 ಕೋಟಿ ರೂ. ಮತ್ತು ಕರ್ನಾಟಕಕ್ಕೆ 950 ಕೋಟಿ ರೂ. ನೀಡಲಾಗಿದೆ.


ಜುಲೈ 2019 ರಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮತ್ತೆ ಬಜೆಟ್ ಮಂಡಿಸಲಾಗುವುದು.