ನವದೆಹಲಿ: ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಗಳಿಗೆ ಮೂಹೂರ್ತ ಫಿಕ್ಸ್ ಮಾಡಿ ಗುರುವಾರ ಚುನಾವಣೆ ಆಯೋಗ ದಿನಾಂಕ ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜೋತಿ ಪತ್ರಿಕಾಗೋಷ್ಠಿ ನಡೆಸಿ, ಫೆಬ್ರವರಿ 18 ರಂದು ತ್ರಿಪುರದಲ್ಲಿ ಮತದಾನ ನಡೆಯಲಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆಬ್ರವರಿ 27 ರಂದು ಮತದಾನ ನಡೆಯಲಿದೆ. ಮೂರು ರಾಜ್ಯಗಳ ಚುನಾವಣಾ ಫಲಿತಾಂಶಗಳು ಮಾರ್ಚ್ 3 ರಂದು ಘೋಷಿಸಲ್ಪಡುತ್ತವೆ ಎಂದು ತಿಳಿಸಿದ್ದಾರೆ. ಇಂದಿನಿಂದಲೂ ಎಲ್ಲಾ ಮೂರು ರಾಜ್ಯಗಳಲ್ಲಿ ನೀತಿ ಸಂಹಿತೆಯನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ಮೂರು ರಾಜ್ಯಗಳಲ್ಲಿ ಚುನಾವಣೆಗಾಗಿ ವಿವಿಪತ್(VVPAT) ಅನ್ನು ಬಳಸಲಾಗುವುದು ಎಂದು ಅವರು ತಿಳಿಸಿದರು.


COMMERCIAL BREAK
SCROLL TO CONTINUE READING

ಅನುಕ್ರಮವಾಗಿ 60 ಸ್ಥಾನಗಳನ್ನು ಹೊಂದಿರುವ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ಸರ್ಕಾರದ ಅಧಿಕಾರವು ಕ್ರಮವಾಗಿ ಮಾರ್ಚ್ 6, 13, 14 ರಂದು ಕೊನೆಗೊಳ್ಳುತ್ತದೆ.


ತ್ರಿಪುರದಲ್ಲಿ ಎಡ ಪಕ್ಷ ಸರ್ಕಾರವಾಗಿದ್ದು, ಮೇಘಾಲಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ನಾಗಾ ಪೀಪಲ್ಸ್ ಫ್ರಂಟ್-ಲೀಡ್ ಡೆಮೋಕ್ರಾಟಿಕ್ ಒಕ್ಕೂಟವು ನಾಗಾಲ್ಯಾಂಡ್ನಲ್ಲಿ ಆಡಳಿತ ನಡೆಸುತ್ತಿದೆ. ಡೆಮಾಕ್ರಟಿಕ್ ಸಮ್ಮಿಶ್ರವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲಿಸುತ್ತದೆ.


ಚುನಾವಣಾ ಆಯೋಗ ತಂಡವು ಮೂರು ರಾಜ್ಯಗಳಿಗೂ ಭೇಟಿ ನೀಡಿತ್ತು...
ಇದಕ್ಕೂ ಮೊದಲು, ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಚುನಾವಣಾ ಆಯೋಗವು ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯಕ್ಕೆ ಭೇಟಿ ನೀಡಿದ್ದು, ಹಲವಾರು ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿ ಮುಂಬರುವ ಚುನಾವಣೆಗಳಿಗೆ ಸಿದ್ಧವಾಗಬೇಕೆಂದು ತಿಳಿಸಿದೆ.


ಮೇಘಾಲಯದಲ್ಲಿ ಮಹಿಳಾ ಮತದಾರರೇ ಹೆಚ್ಚು...
ಮೇಘಾಲಯದಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಮತದಾರರಲ್ಲಿ ಪುರುಷರು ಹಿಂದೆ ಬಿದ್ದಿದ್ದಾರೆ ಎಂಬುದು ಗಮನಾರ್ಹ ಸಂಗತಿ. ರಾಜ್ಯದಲ್ಲಿ 50.4 ರಷ್ಟು ಸ್ತ್ರೀ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ 18,30,104 ಮತದಾರರು ಇದ್ದಾರೆ. ಅದರಲ್ಲಿ 9,23,848 ಮಹಿಳೆಯರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ತಿಳಿಸಿದ್ದಾರೆ. ಮೇಘಾಲಯ ವಿವಿಧ ವಿಭಾಗಗಳಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಸರ್ಕಾರದ ಅವಧಿಯು ಮಾರ್ಚ್ 6ರಂದು ಕೊನೆಗೊಳ್ಳುವುದರಿಂದ ಈ ವರ್ಷದ ಮೊದಲಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಸಲಾಗುವುದು. ಚುನಾವಣಾ ದಿನಾಂಕವನ್ನು ಘೋಷಿಸುವ ಮೊದಲು ಚುನಾವಣಾ ಆಯೋಗ ಅಂತಿಮ ಸಿದ್ಧತೆಗಳನ್ನು ಮಾಡುತ್ತಿದೆ ಎಂದು ಸಿಇಒ ತಿಳಿಸಿದ್ದರು.


ಮತದಾರರ ಪಟ್ಟಿಯಲ್ಲಿ 8,276 ಹೆಸರುಗಳನ್ನು ಹಿಂಪಡೆಯಲಾಗಿದೆ ಮತ್ತು 6,645 ಆರೋಪಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಿಇಒ ಹೇಳಿದರು. ರಾಜ್ಯ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, ಮೇಘಾಲಯದಲ್ಲಿ 32 ಲಕ್ಷ ಜನಸಂಖ್ಯೆ ಹೊಂದಿರುವ 74.4 ಪ್ರತಿಶತದಷ್ಟು ಸಾಕ್ಷರತಾ ಪ್ರಮಾಣವಿದೆ.