ನವದೆಹಲಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ದುರ್ಗಾ ಪೂಜಾ ಕಾರ್ಯಕ್ರಮವೊಂದರಲ್ಲಿ ತಮಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೆ ಅವಮಾನ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಧಂಖರ್, ದುರ್ಗಾ ಪೂಜಾ ಸಮಾರಂಭದಲ್ಲಿ ನಾನು ಅವಮಾನಕ್ಕೊಳಗಾಗಿದ್ದೇನೆ. ಇದರಿಂದ ನನಗೆ ತುಂಬಾ ನೋವಾಗಿದೆ. ಅದು ನನಗಷ್ಟೇ ಆದ ಅವಮಾನ ಅಲ್ಲ, ಇಡೀ ಪಶ್ಚಿಮ ಬಂಗಾಳದ ಜನತೆಗೆ ಆದ ಅವಮಾನ. ಆ ಅವಮಾನವನ್ನು ಜೀರ್ಣಿಸಿಕೊಳ್ಳಲೂ ಸಾಧ್ಯವಿಲ್ಲ. ನಾನು ಈ ರಾಜ್ಯದ ಜನಸೇವಕ. ಹಾಗಾಗಿ, ಇದ್ಯಾವುದೂ ನಾನು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯಲು ಸಾಧ್ಯವಿಲ್ಲ" ಎಂದು ಹೇಳಿದರು.


ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಗಣ್ಯರು ಕುಳಿತಿದ್ದ ಮುಖ್ಯ ವೇದಿಕೆಯಲ್ಲಿ ನನಗೆ ಸ್ಥಾನ ನೀಡದೆ ಅವಮಾನ ಮಾಡಿದ್ದಲ್ಲದೆ, ಯಾವುದೋ ಮೂಲೆಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವನ್ನೂ ಸಹ ಸರಿಯಾಗಿ ವೀಕ್ಷಿಸಲು ಸಾಧ್ಯವಾಗಲಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಆ ಕಾರ್ಯಕ್ರಮದಲ್ಲಿ ಪಾಲ್ಗೊಂದಿದ್ದರೂ, ಯಾವುದೇ ವಾಹಿನಿಯಲ್ಲಿ ನನ್ನನ್ನು ತೋರಿಸಿಲ್ಲ. ಇಡೀ ಘಟನೆಯನ್ನು ತಮ್ಮ ಜೀವನದ ನೋವಿನ ಕ್ಷಣ ಎಂದು ಹೇಳಿದರು.