Festive season offer: ಮಾರುತಿ ಕಾರುಗಳ ಮೇಲೆ 1.8 ಲಕ್ಷ ರೂ.ವರೆಗೆ ರಿಯಾಯಿತಿ
ನೀವೂ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ನಿಮಗೆ ಸೂಕ್ತ ಸಮಯವಾಗಿದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹುಂಡೈ ಕಂಪನಿಗಳು ಈ ಹಬ್ಬಗಳ ಋತುವಿನಲ್ಲಿ ತಮ್ಮ ಕಾರುಗಳಲ್ಲಿ ಭಾರೀ ರಿಯಾಯಿತಿ ನೀಡುತ್ತಿವೆ.
ನವದೆಹಲಿ: ಹಬ್ಬದ ಋತು ಪ್ರಾರಂಭವಾಗಿದೆ. ನವರಾತ್ರಿ, ದೀಪಾವಳಿಯಂತಹ ಈ ಪವಿತ್ರ ಋತುವಿನಲ್ಲಿ ಜನರು ಹೊಸತನ್ನು ಖರೀದಿಸಲು ಬಯಸುತ್ತಾರೆ. ಈ ಸಮಯದಲ್ಲಿ ಇ-ಕಾಮರ್ಸ್ ಕಂಪನಿಗಳು ಮಾತ್ರವಲ್ಲದೆ ವಾಹನಗಳ ಕಂಪನಿಗಳು ಸಹ ತಮ್ಮ ಗ್ರಾಹಕರಿಗೆ ಬಂಪರ್ ರಿಯಾಯಿತಿ ನೀಡಲು ಮುಂದಾಗಿವೆ. ಹೌದು, ನೀವೂ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ನಿಮಗೆ ಸೂಕ್ತ ಸಮಯವಾಗಿದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹುಂಡೈ ಕಂಪನಿಗಳು ಈ ಹಬ್ಬಗಳ ಋತುವಿನಲ್ಲಿ ತಮ್ಮ ಕಾರುಗಳಲ್ಲಿ ಭಾರೀ ರಿಯಾಯಿತಿ ನೀಡುತ್ತಿವೆ.
ಈ ಕಾರುಗಳ ಮೇಲೆ ಮಾರುತಿ ಸುಜುಕಿ ಭಾರೀ ರಿಯಾಯಿತಿ ನೀಡುತ್ತಿದೆ:
ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ತನ್ನ ವ್ಯಾಗನ್ ಆರ್ ಕಾರಿಗೆ ಒಂದು ಲಕ್ಷ ರೂಪಾಯಿ ನಗದು ರಿಯಾಯಿತಿ ನೀಡುತ್ತಿದೆ. ಏಕೆಂದರೆ ವ್ಯಾಗನ್ ಆರ್ ನ ಹೊಸ ಆವೃತ್ತಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಮಾರುತಿ ಬಲೆನೊಗೆ ಕಡಿಮೆ ರಿಯಾಯಿತಿ ಅಂದರೆ 10,000 ರೂ. ರಿಯಾಯಿತಿ ನೀಡುತ್ತಿದೆ. ಇನ್ನು ವ್ಯಾಗನ್ ಮೇಲಿನ ಒಟ್ಟು ರಿಯಾಯಿತಿ ಬಗ್ಗೆ ನಾವು ಮಾತನಾಡಿದರೆ, ಗರಿಷ್ಠ 1.85 ಲಕ್ಷ ರೂ. ವರೆಗೆ ರಿಯಾಯಿತಿ ಲಭಿಸಲಿದೆ. ಇದು 85,000 ರೂಪಾಯಿಗಳವರೆಗೆ ಎಕ್ಸ್ಚೆಂಜ್ ಬೋನಸ್ ಒಳಗೊಂಡಿದೆ. ಮಾರುತಿ ವಿತರಕರು ಕಾರ್ಪೋರೇಟ್ಗಳಿಗೆ 15,000 ರೂ. ಹೆಚ್ಚುವರಿ ರಿಯಾಯಿತಿ ನೀಡುತ್ತಿದ್ದಾರೆ.
ಮಾರುತಿಯ ಯಾವ ಕಾರಿಗೆ ಎಷ್ಟು ರಿಯಾಯಿತಿ?
ಮಾರುತಿ ಸುಜುಕಿ ಆಲ್ಟೊ 800 ಕಾರಿನ ಮೇಲೆ 40,000 ರೂ. ಕ್ಯಾಶ್ ರಿಯಾಯಿತಿ ನೀಡುತ್ತಿದೆ. ಈ ಕಾರಿನ ಮೇಲೆ 50,000 ರೂ. ಎಕ್ಸ್ಚೇಂಜ್ ಬೋನಸ್ ದೊರೆಯಲಿದೆ. ಆಲ್ಟೊ ಕೆ 10 ರ ಮೇಲೆ 50,000 ರೂ. ಕ್ಯಾಶ್ ಡಿಸ್ಕೌಂಟ್ ಹಾಗೂ 65,000 ರೂ. ಎಕ್ಸ್ಚೇಂಜ್ ಬೋನಸ್ ಸಿಗಲಿದೆ.
ಸೆಲೆರಿಯೊ 95,000 ನಗದು ರಿಯಾಯಿತಿಗಳು ಮತ್ತು 40,000 ರೂಪಾಯಿ ಎಕ್ಸ್ಚೇಂಜ್ ಬೋನಸ್ ಪಡೆಯುತ್ತದೆ. ನೀವು ಮಾರುತಿ ಡಿಜೈರ್ ಖರೀದಿಸಲು ಯೋಜಿಸುತ್ತಿದ್ದರೆ, ಉತ್ತಮ ಅವಕಾಶವಿದೆ. ಇದು 40,000 ರೂಪಾಯಿ ನಗದು ರಿಯಾಯಿತಿ ಮತ್ತು ರೂ. 50,000 ರ ಎಕ್ಸ್ಚೇಂಜ್ ಬೋನಸ್ ದೊರೆಯಲಿದೆ.
ಬಾಲೆನೋ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಇದರಲ್ಲಿ 10,000 ರೂಪಾಯಿಗಳ ನಗದು ರಿಯಾಯಿತಿಗಳು ಮತ್ತು ರೂ. 20,000 ರ ಎಕ್ಸ್ಚೇಂಜ್ ಬೋನಸ್ ಮತ್ತು 15,000 ರೂ.ಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ. ಅದೇ ಸಮಯದಲ್ಲಿ, ಮಾರುತಿ ಸ್ವಿಫ್ಟ್ನಲ್ಲಿ ರೂ. 30,000 ರ ನಗದು ರಿಯಾಯಿತಿ ಮತ್ತು ರೂ. 35,000 ರ ಎಕ್ಸ್ಚೇಂಜ್ ಬೋನಸ್ ಅನ್ನು ನೀಡಲಾಗಿದೆ.