Coronavirus ಪ್ರಭಾವ ಇಲ್ಲದ ಕಡೆ ನಾಳೆಯಿಂದ ಲಾಕ್ ಡೌನ್ ನಲ್ಲಿ ಸಡಿಲಿಕೆ, ಯಾವ ಸೇವೆಗಳು ಆರಂಭ?
ಏಪ್ರಿಲ್ 20ರ ಬಳಿಕ ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಕೆಲಸ ಆರಂಭಿಸಲು ಸೂಚನೆ ನೀಡಲಾಗಿದೆ. ಆದರೆ. ಸರಕುಗಳ ಡಿಲೆವರಿಗಾಗಿ ವಾಹನಗಳಿಗೆ ಬೇಕಾಗುವ ಆವಶ್ಯಕ ಅನುಮತಿಯನ್ನು ಪಡೆಯುವುದು ಅನಿವಾರ್ಯವಾಗಿದೆ.
ನವದೆಹಲಿ : ಕೇಂದ್ರ ಸರ್ಕಾರ ಸೋಮವಾರದಿಂದ ಕೆಲ ಸರ್ಕಾರಿ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಿದೆ. ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಲು ಉದ್ದೇಶಿಸಿರುವ ಸೇವೆಗಳು ಹಾಗೂ ಚಟುವಟಿಕೆಗಳಿಗಾಗಿ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ. ಆದರೆ ನಾಳೆ ಅಂದರೆ ಏಪ್ರಿಲ್ 20 ರ ಬಳಿಕ ಕೊರೊನಾ ವೈರಸ್ ಪ್ರಭಾವ ಇಲ್ಲದೆ ಇರುವ ಪ್ರದೇಶಗಳಲ್ಲಿ ಮಾತ್ರ ಈ ಸಡಿಲಿಕೆ ಇರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಕುರಿತು ಕೇಂದ್ರ ಟೆಲಿಕಾಂ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ವೊಂದನ್ನು ಮಾಡಿದ್ದು, ಈ ಟ್ವೀಟ್ ನಲ್ಲಿ ಆರೋಗ್ಯ ಸೇವೆ, ಕೃಷಿ ಉತ್ಪನ್ನ ಮಾರಾಟ , ಮೀನುಗಾರಿಕೆ, ಹೈನುಗಾರಿಕೆ ಉತ್ಪನ್ನಗಳು ಶಾಮೀಲಾಗಿವೆ. ತಮ್ಮ ಟ್ವೀಟ್ ನಲ್ಲಿ ಈ ಕುರಿತು ಬರೆದುಕೊಂಡಿರುವ ರಚಿಶಂಕರ್ ಪ್ರಸಾದ್, ಕೆಲವೇ ಕೆಲ ಪ್ರಕರಣಗಳಲ್ಲಿ ಈ ಸಡಿಲಿಕೆ ನೀಡಲಾಗಿದ್ದು, ಕಂಟೆನ್ ಮೆಂಟ್ ಜೋನ್ ಗಳಲ್ಲಿ ಯಾವುದೇ ರೀತಿಯ ಅನುಮತಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ GoM ಸಭೆ ನಡೆಸಿದ್ದು, ಬಂದ್ ವೇಳೆ ಗೃಹ ಸಚಿವಾಲಯ ಗಾರಿಗೊಲಿಸಿರುವ ಗೈಡ್ ಲೈನ್ ಆಡಿಯೇ ಕೆಲ ಸೇವೆಗಳಿಗೆ ಸಡಿಲಿಕೆ ನೀಡಲಾಗುವುದು. ಆದರೆ, ವಿವಿಧ ರಾಜ್ಯ ಸರ್ಕಾರಗಳು ತಮ್ಮದೇ ಆದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದೂ ಕೂಡ ಸೂಚಿಸಿದೆ. ಗ್ರಾಮೀಣ ಇಲಾಖೆಗಳಲ್ಲಿ ಕೋ-ಆಪ್ ರೆಟಿವ್ ಕ್ರೆಡಿಟ್ ಸೊಸೈಟಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ನೀರು ಸರಬರಾಜು, ವಿದ್ಯುತ್ ಹಾಗೂ ಸಂಚಾರಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ಚಟುವಟಿಕೆಗಳಿಗೆ ಅನುಮತಿ ನೀಡಿರುವುದು ಇಲ್ಲಿ ಗಮನಾರ್ಹ.
ಇವುಗಳಲ್ಲದೆ ಸರ್ಕಾರ, ಬಿದಿರು, ತೆಂಗು, ಅಡಿಕೆ, ಕೋಕೋ, ಮಸಾಲೆಗಳ ಕೃಷಿ, ಕಟಾವು, ಪ್ರೊಸೆಸಿಂಗ್, ಪ್ಯಾಕೆಜಿಂಗ್, ಹಣ್ಣು-ತರಕಾರಿ ಬಂಡಿಗಳು, ಸ್ವಚ್ಚತೆಯ ಸಾಮಾನುಗಳ ಮಾರಾಟ ಮಾಡುವ ಅಂಗಡಿಗಳು, ಎಲೆಕ್ಟ್ರಿಷಿಯನ್, IT ರಿಪೆಯರ್ಸ್, ಪ್ಲಂಬರ್, ಮೋಟರ್ ಮೆಕ್ಯಾನಿಕ್, ಕಾರ್ಪೆಂಟರ್, ಕುರಿಯರ್, DTH ಹಾಗೂ ಕೇಬಲ್ ಸರ್ವಿಸ್ ಗಳಿಗೆ ಕೆಲ ನಿಬಂಧನೆಗಳ ಅಡಿ ಅನುಮತಿ ನೀಡಿದೆ..
ಏಪ್ರಿಲ್ 20ರ ಬಳಿಕೆ ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಚಟುವಟಿಕೆಗಳನ್ನೂ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಸರಕುಗಳ ದಿಲೆವರಿಗಾಗಿ ವಾಹನಗಳಿಗೆ ಬೇಕಾಗುವ ಅವಶ್ಯಕ ಅನುಮತಿಯನ್ನು ಪಡೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದೆ. ಸರ್ಕಾರಿ ಚಟುವಟಿಕೆಗಳಿಗೆ ಕಾರ್ಯನಿರ್ವಹಿಸುವ ಡೇಟಾ ಹಾಗೂ ಕಾಲ್ ಸೆಂಟರ್, IT ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳ ಕಚೇರಿಗಳಿಗೂ ಕೂಡ ಮಂಜೂರಾತಿ ನೀಡಲಾಗಿದೆ. ಆದರೆ, ಶೇ.50ಕ್ಕಿಂತ ಸಿಬ್ಬಂದಿಗಳು ಇರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.