ನವದೆಹಲಿ: ಕ್ರಿಕೆಟಿಗ ಮೊಹಮ್ಮದ್ ಶಮಿ ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆಂದು ಪತ್ನಿ ಹಾಸಿನ್ ಜಹಾನ್ ರವರು ಕೊಲ್ಕತಾದ ಜಾಧವಪುರ ಪೋಲಿಸ್ ಠಾಣೆ ಲಿಖಿತ ದೂರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ದೂರಿನಲ್ಲಿ ಪತಿ ಶಮಿ ಮತ್ತು  ಕುಟುಂಬದ ನಾಲ್ಕು ಸದಸ್ಯರ ಹೆಸರುಗಳನ್ನೂ ಪ್ರಸ್ತಾಪಿಸಿದ್ದಾರೆ. ಪೊಲೀಸರು ಕ್ರಿಕೆಟಿಗ ಮೊಹಮ್ಮದ್ ಶಮಿ ಮೇಲೆ  ಸೆಕ್ಷನ್ 307(ಕೊಲೆ) 323(ಉದ್ದೇಶಪೂರ್ವವಾಗಿ ಹಿಂಸೆ) 376(ಅತ್ಯಾಚಾರ) ಪ್ರಕರಣಗಳನ್ನು ದಾಖಲಿಸಿದ್ದಾರೆ.


ಹಾಸಿನ್ ಜಹಾನ್ ರವರು ಶಮಿ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ಅಲ್ಲದೆ ವಿವಾಹೇತರ ಸಂಬಂಧ ಹೊಂದಿರುವ ಕುರಿತು ಅವರು ದೂರು ದಾಖಲಿಸಿದ್ದಾರೆ.