ಕೊನೆಗೂ ಸತ್ಯವೇ ಗೆದ್ದಿತು, ಸೋತವರಿಗೆ ಭಾವಪೂರ್ಣ ಸಂತಾಪಗಳು - ಶತ್ರುಘ್ನ ಸಿನ್ಹಾ
ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪಂಚ ರಾಜ್ಯಗಳ ಚುನಾವಣೆಯಲ್ಲಿನ ಫಲಿತಾಂಶಕ್ಕೆ ಪ್ರತಿಕ್ರಿಯಿಸಿಸುತ್ತಾ ಕೊನೆಗೂ ಸತ್ಯವೇ ಗೆದ್ದಿದೆ ಸೋತವರಿಗೆ ಭಾವಪೂರ್ಣ ಸಂತಾಪಗಳು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪಂಚ ರಾಜ್ಯಗಳ ಚುನಾವಣೆಯಲ್ಲಿನ ಫಲಿತಾಂಶಕ್ಕೆ ಪ್ರತಿಕ್ರಿಯಿಸಿಸುತ್ತಾ ಕೊನೆಗೂ ಸತ್ಯವೇ ಗೆದ್ದಿದೆ ಸೋತವರಿಗೆ ಭಾವಪೂರ್ಣ ಸಂತಾಪಗಳು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸೋಲಿಗೆ ಅಹಂಕಾರ, ಕಳಪೆ ಪ್ರದರ್ಶನ ಮತ್ತು ಅತಿಯಾದ ಆತ್ಮ ವಿಶ್ವಾಸ ಕಾರಣ ಎಂದು ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಕೊನೆಗೂ ಸತ್ಯವೇ ಗೆದ್ದಿದೆ. ಈ ಅದ್ಭುತವಾದ ನಿರೀಕ್ಷಿತ ಜಯ ಗಳಿಸಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.
ಯಾರು ಸೋಲನ್ನು ಅನುಭವಿಸಿದ್ದಾರೋ ಅಂತವರ ಅಹಂಕಾರ, ಕಳಪೆ ಪ್ರದರ್ಶನ, ಅತಿಯಾದ ಆತ್ಮವಿಶ್ವಾಸ ಕಾರಣ ಅವರಿಗೆ ಭಾವಪೂರ್ಣ ಸಂತಾಪಗಳಿಗೆ ಅರ್ಹರು. ಒಳ್ಳೆಯ ಬುದ್ದಿಮತ್ತೆ ಮತ್ತು ಉತ್ತಮ ಪ್ರಜ್ಞೆ ಬರಲಿ ..ಪ್ರಜಾಪ್ರಭುತ್ವಕ್ಕೆ ಜಯವಾಗಲಿ.ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.