ಜಾತಿ ಸೂಚಕ ಪದಗಳನ್ನು ಹೊಂದಿರುವ 250 ಕ್ಕೂ ಅಧಿಕ ವಾಹನಗಳಿಗೆ ದಂಡ
ಜಾತಿ ಸೂಚಕ ಪದಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ಸೇರಿದಂತೆ 250ಕ್ಕೂ ಹೆಚ್ಚು ವಾಹನಗಳಿಗೆ ನೋಯ್ಡಾ ಪೊಲೀಸರು ದಂಡ ವಿಧಿಸಿದ್ದಾರೆ.ಅಪರಾಧ ಹಾಗೂ ಗೊಂದಲ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೋಯ್ಡಾ ಪೊಲೀಸರು `ಆಪರೇಷನ್ ಕ್ಲೀನ್` ನ ಭಾಗವಾಗಿ ಗೌತಮ್ ಬುದ್ಧ ನಗರದಾದ್ಯಂತ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ನವದೆಹಲಿ: ಜಾತಿ ಸೂಚಕ ಪದಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ಸೇರಿದಂತೆ 250ಕ್ಕೂ ಹೆಚ್ಚು ವಾಹನಗಳಿಗೆ ನೋಯ್ಡಾ ಪೊಲೀಸರು ದಂಡ ವಿಧಿಸಿದ್ದಾರೆ.ಅಪರಾಧ ಹಾಗೂ ಗೊಂದಲ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೋಯ್ಡಾ ಪೊಲೀಸರು 'ಆಪರೇಷನ್ ಕ್ಲೀನ್' ನ ಭಾಗವಾಗಿ ಗೌತಮ್ ಬುದ್ಧ ನಗರದಾದ್ಯಂತ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ನಗರ ಪ್ರದೇಶಗಳಲ್ಲಿ 100 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 33 ವಾಹನಗಳನ್ನು ಜಾತಿ ಸೂಚಕ ಪದಗಳನ್ನು ಹೊಂದಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ನಗರ ಪ್ರದೇಶಗಳಲ್ಲಿ 78 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 13 ವಾಹನಗಳ ಮೇಲೆ ಆಕ್ರಮಣಕಾರಿ ಹೇಳಿಕೆ ವಿಚಾರವಾಗಿ ಮತ್ತು ಇನ್ನುಳಿದ 56 ವಾಹನಗಳ ನಂಬರ್ ಪ್ಲೇಟ್‌ಗಳನ್ನು ಹಾಳು ಮಾಡಿದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ದೃಷ್ಟಿಯಿಂದ ಭದ್ರತಾ ತಪಾಸಣೆ ಮತ್ತು ಗಸ್ತು ತಿರುಗುವುದರಿಂದ ಪೊಲೀಸರು ಪ್ರಮುಖ ಆಭರಣ ಅಂಗಡಿಗಳು, ಇಂಧನ ಕೇಂದ್ರಗಳು ಮತ್ತು ಮಾರುಕಟ್ಟೆಗಳಲ್ಲಿ ಬೆಳಿಗ್ಗೆ 11 ರಿಂದ ರಾತ್ರಿ 11 ರವರೆಗೆ ತಪಾಸಣೆ ನಡೆಸಿದರು ಎನ್ನಲಾಗಿದೆ.'ನಂಬರ್ ಪ್ಲೇಟ್‌ಗಳಲ್ಲಿ ಜಾತಿಸೂಚಕ ಪದಗಳನ್ನು ಅಥವಾ ಆಕ್ರಮಣಕಾರಿ ಟೀಕೆಗಳನ್ನು ಬರೆಯುವ ಅಭ್ಯಾಸವನ್ನು ಕುಂಠಿತಗೊಳಿಸಬೇಕಾಗಿದೆ. ಇಂತಹ ಬರಹಗಳು ಜನರಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತವೆ. ಆದ್ದರಿಂದ ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ' ಎಂದು ಗೌತಮ್ ಬುದ್ಧ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಕೃಷ್ಣ ಹೇಳಿದ್ದಾರೆ.