ಶಿವಮೊಗ್ಗ: ಕರ್ನಾಟಕದ ಶಿವಮೊಗದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪಿಎಂ ಕೆಯರ್ ಫಂಡ್ ಕುರಿತು ಸೋನಿಯಾ ದುಷ್ಪ್ರಚಾರ ಮಾಡಿದ್ದಾರೆ ಎಂದು FIR ನಲ್ಲಿ ಆರೋಪಿಸಲಾಗಿದೆ.


COMMERCIAL BREAK
SCROLL TO CONTINUE READING

ಮೇ 11 ರಂದು ಕಾಂಗ್ರೆಸ್ ನ ಟ್ವಿಟರ್ ಹ್ಯಾಂಡಲ್ ಪಿಎಂ ಕೇರ್ ಫಂಡ್ ಬಗ್ಗೆ ಆಧಾರ ರಹಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಪ್ರವೀಣ್ ಕೆ.ವಿ ಹೆಸರಿನ ವಕೀಲರೊಬ್ಬರು ಕರ್ನಾಟಕದ ಶಿವಮೊಗ್ಗದಲ್ಲಿ ಈ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಸೋನಿಯಾ ಮತ್ತು ಇತರ ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಆದರೆ ಯಾವ ಟ್ವೀಟ್ ಗೆ ಸಂಬಂಧಿಸಿದಂತೆ ಈ FIR ದಾಖಲಿಸಲಾಗಿದೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.


ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸೋನಿಯಾ ಹೇಳಿದ್ದೇನು?
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸೋನಿಯಾ ಗಾಂಧಿ, ಕೊರೊನಾ ಬಿಕ್ಕಟ್ಟನ್ನು ಎದುರಿಸಲು 'ಪಿಎಂ ಕೆಯರ್ಸ್' ಫಂಡ್ ಗೆ ಬಂದ ಸಂಪೂರ್ಣ ಮೊತ್ತವನ್ನು 'ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ'ಗೆ ವರ್ಗಾಯಿಸಲು ಸಲಹೆ ನೀಡಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸೋನಿಯಾ," ಸಾರ್ವಜನಿಕ ಸೇವಾ ನಿಧಿಗಳ ವಿತರಣೆಗೆ ಎರಡು ಪ್ರತ್ಯೇಕ ನಿಧಿಗಳನ್ನು ರಧಿಸುವುದರಿಂದ ಕಠಿಣ ಪರಿಶ್ರಮ ಹಾಗೂ ಸಂಪನ್ಮೂಲಗಳು ಹಾಳಾಗುತ್ತವೆ. PM-NRFನಲ್ಲಿ ಈಗಾಗಲೇ ಸುಮಾರು 3800 ಕೋಟಿ ರೂ.ಗಳು ಬಳಕೆಯಾಗದೆಯೇ ಉಳಿದಿವೆ (2019ರ ಅಂತ್ಯದ ವರೆಗೆ). ಹೀಗಾಗಿ ಈ ಎರಡೂ ನಿಧಿಗಳನ್ನು ಒಂದುಗೂಡಿಸುವ ಮೂಲಕ ಸಮಾಜದ ಅಂಚಿನಲ್ಲಿರುವ ಜನರಿಗೆ ತಕ್ಷಣ ಆಹಾರ ಮತ್ತು ಭದ್ರತೆಯನ್ನು ಒದಗಿಸಬೇಕು" ಎಂದು ಸೋನಿಯಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.