ಬಾಗ್‌ಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಾಗಿ ಬಾಗ್‌ಪತ್‌ನ ಬರೌತ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದ ಕುಸ್ತಿಪಟು ಬಬಿತಾ ಫೋಗಟ್ (Wrestler Babita Phogat) ವಿರುದ್ಧ ಪ್ರಕರಣ ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಸಿಧು ಅವರನ್ನ ಸಚಿವರನ್ನಾಗಿ ಮಾಡುವಂತೆ ಪಾಕ್‌ನಿಂದ ಬಂದಿದ್ದೆ ಮೆಸೇಜ್'


ಪ್ರಚಾರದ ವೇಳೆಯಲ್ಲಿ ಚುನಾವಣಾ ಆಯೋಗದ (Election Commission) ಮಾರ್ಗಸೂಚಿಗಳು ಮತ್ತು ಕೊರೊನಾ ನಿಯಮಗಳನ್ನು (Covid Norms) ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.  


ಬಾಗ್‌ಪತ್‌ನ ಬರೌತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (BJP) ಕೃಷ್ಣಪಾಲ್ ಎಸ್ ಮಲಿಕ್ ಪರ ಫೋಗಟ್ ಪ್ರಚಾರ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ 63 ಜನರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ. 


ಕೊವಿಡ್ (Corona Cases) ಪ್ರಕರಣಗಳ ಉಲ್ಬಣದ ಮಧ್ಯೆ, ಭಾರತೀಯ ಚುನಾವಣಾ ಆಯೋಗವು ಶನಿವಾರದಂದು ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: ಪಂಜಾಬ್‌ ವಿಧಾನಸಭಾ ಚುನಾವಣೆ 2022 : 65 ಸ್ಥಾನಗಳಿಗೆ ಸ್ಪರ್ಧೆಗಿಳಿದ ಬಿಜೆಪಿ!


ಉತ್ತರ ಪ್ರದೇಶದಲ್ಲಿ  (UP Assembly election) ಮೊದಲ ಹಂತದ ಮತದಾನ ಫೆಬ್ರವರಿ 10, ಎರಡನೇ ಹಂತ ಫೆಬ್ರವರಿ 14, ಮೂರನೇ ಹಂತ ಫೆಬ್ರವರಿ 20, ನಾಲ್ಕನೇ ಹಂತ ಫೆಬ್ರವರಿ 23, ಐದನೇ ಹಂತ ಫೆಬ್ರವರಿ 27, ಆರನೇ ಹಂತ ಮಾರ್ಚ್ 3 ಮತ್ತು ಮಾರ್ಚ್ 3 ರಂದು ಹಾಗೂ ಏಳನೇ ಹಂತ ಮಾರ್ಚ್ 7 ರಂದು ನಡೆಯಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.