ಲುಧಿಯಾನ ಜವಳಿ ಫ್ಯಾಕ್ಟರಿಯಲ್ಲಿ ಬೆಂಕಿ

ಪಂಜಾಬಿನ ಲುಧಿಯಾನದ ಶಿವಪುರಿ ಚೌಕ್ ಸಮೀಪದ ಜವಳಿ ಕಾರ್ಖಾನೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ.
ಲುಧಿಯಾನ: ಪಂಜಾಬಿನ ಲುಧಿಯಾನದ ಶಿವಪುರಿ ಚೌಕ್ ಸಮೀಪದ ಜವಳಿ ಕಾರ್ಖಾನೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ 16 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಅವಘಡಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಪೂರ್ವ) ಅಮರ್ಜಿತ್ ಸಿಂಗ್ ಹೇಳಿದ್ದಾರೆ.
ಬೆಂಕಿ ಅವಘಡದಿಂದಾಗಿ ಕಾರ್ಖಾನೆಯಲ್ಲಿದ್ದ ಕಚ್ಚಾ ಸಾಮಗ್ರಿಗಳು, ಸರಕುಗಳು ಮತ್ತು ಯಂತ್ರಗಳು ಸಂಪೂರ್ಣ ನಾಶವಾಗಿದೆ. ಕಟ್ಟಡ ಸಹ ಹಾನಿಗೊಳಗಾಗಿದೆ ಎಂದು ಕಾರ್ಖಾನೆ ವ್ಯವಸ್ಥಾಪಕ ನಿತಿನ್ ಮೆಹ್ರಾ ತಿಳಿಸಿದ್ದಾರೆ.