ಮುಂಬೈ: ಮಾಯನಗರಿ ಮುಂಬೈನ ಅಂಧೇರಿ ವೀರ ದೇಸಾಯಿ ರಸ್ತೆ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಕೂಡಲೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ನಿರತವಾಗಿವೆ. ಈವರೆಗೆ ಅಗ್ನಿಶಾಮಕ ದಳ 3 ಜನರನ್ನು ರಕ್ಷಿಸಿ  ಸ್ಥಳಾಂತರಿಸಿದೆ.


ಈ ಕಟ್ಟಡವು 17 ಮಹಡಿಗಳನ್ನು ಹೊಂದಿದ್ದು, ಆರಂಭದಲ್ಲಿ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಕಟ್ಟಡವನ್ನು ಆವರಿಸಿಕೊಂಡಿದೆ ಎನ್ನಲಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.