ಮಹಾರಾಷ್ಟ್ರದ ಥಾಣೆಯಲ್ಲಿ ಬಹುಮಹಡಿ ಕಟ್ಟಡಕ್ಕೆ ಬೆಂಕಿ
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಶುಕ್ರವಾರದಂದು ನಡೆದ ಗಿರಿಜಾ ಹೈಟ್ಸ್ ಕಟ್ಟಡದಲ್ಲಿ ಬೆಂಕಿ ಸಂಭವಿಸಿದೆ. ಇದನ್ನು ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಇತರ ತುರ್ತು ಸೇವೆಗಳು ಈ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿವೆ.
ಮುಂಬೈನ ಲೋವರ್ ಪ್ಯಾರೆಲ್ನ ನವ್ರಾಂಗ್ ಸ್ಟುಡಿಯೋದ ನಾಲ್ಕನೇ ಮಹಡಿಯಲ್ಲಿ ಬೆಂಕಿ ನಂದಿಸುವ ವೇಳೆಯಲ್ಲಿ ಅಗ್ನಿಶಾಮಕ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.ಸುಮಾರು 12 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಣದಲ್ಲಿ ತೊಡಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಘಟನೆಯು ಡಿಸೆಂಬರ್ 29, 2017 ರಂದು ಬೃಹತ್ ಕಮಲಾ ಮಿಲ್ಸನಲ್ಲಿ ಹೊತ್ತಿದ ಒಂದು ತಿಂಗಳೊಳಗೆ ಮತ್ತೆ ಅದೇ ರೀತಿಯಲ್ಲಿ ಸಂಭವಿಸಿದೆ, ಅದರಲ್ಲಿ 14 ಜನರು ಮೃತಪಟ್ಟು, 12 ಮಂದಿ ಗಾಯಗೊಂಡಿದ್ದರು.