ದೆಹಲಿಯ ಜಾಕಿರ್ ನಗರದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅನಾಹುತ; 5 ಮೃತ, 11 ಮಂದಿಗೆ ಗಾಯ
ಸುಮಾರು ಏಳು ಕಾರುಗಳು, ಎಂಟು ಮೋಟರ್ ಸೈಕಲ್‌ಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ನವದೆಹಲಿ: ದೆಹಲಿಯ ಜಾಕಿರ್ ನಗರದ ಬಹುಮಹಡಿ ಕಟ್ಟಡವೊಂದರಲ್ಲಿ ಕಳೆದ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ.
ಮಧ್ಯರಾತ್ರಿ 2.30 ಕ್ಕೆ ಈ ಅನಾಹುತ ಸಂಭವಿಸಿದ್ದು, ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ವಿದ್ಯುತ್ ಪೆಟ್ಟಿಗೆ(ಎಲೆಕ್ಟ್ರಿಸಿಟಿ ಬಾಕ್ಸ್ ನಲ್ಲಿ)ಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ದುರ್ಘಟನೆ ನಡೆದಿದೆ.
ಈ ಅನಾಹುತ ಸಂಭವಿಸಿದ ಸಂದರ್ಭದಲ್ಲಿ 6 ಮಂದಿ ತಮ್ಮ ಪ್ರಾಣ ರಕ್ಷಣೆಗಾಗಿ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಕೆಳಗೆ ಜಿಗಿದಿದ್ದಾರೆ. ಗಾಯಗೊಂಡವರನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದಲ್ಲದೆ ಕಟ್ಟಡದಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಿಸಲಾಗಿದೆ. ಈ ಅಗ್ನಿ ಅವಘಡದಲ್ಲಿ ಸುಮಾರು 7 ಕಾರುಗಳು ಮತ್ತು 8 ಮೋಟರ್ ಸೈಕಲ್‌ಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.