ಶಂಕಿತ CORONAVAIRUS ಸೋಂಕಿಗೆ ಭಾರತದಲ್ಲಿ ಮೊದಲ ಬಲಿ!
ಅಂತಿಮವಾಗಿ ನಿರೀಕ್ಷಿಸದೆ ಇರುವುದು ನಡೆದು ಹೋಗಿದ್ದು, ಭಾರತದಲ್ಲಿ ಶಂಕಿತ ಕರೋನಾ ವೈರಸ್ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಕರ್ನಾಟಕದ 76 ವರ್ಷದ ನಿವಾಸಿಯೊಬ್ಬರ ಸಾವಿಗೆ ಕರೋನಾ ವೈರಸ್ ಕಾರಣವಾಗಿದೆ ಎಂದು ಹೇಳಲಾಗಿದೆ.
ನವದೆಹಲಿ: ಅಂತಿಮವಾಗಿ ನಿರೀಕ್ಷಿಸದೆ ಇರುವುದು ನಡೆದು ಹೋಗಿದ್ದು, ಭಾರತದಲ್ಲಿ ಶಂಕಿತ ಕರೋನಾ ವೈರಸ್ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಕರ್ನಾಟಕದ 76 ವರ್ಷದ ನಿವಾಸಿಯೊಬ್ಬರ ಸಾವಿಗೆ ಕರೋನಾ ವೈರಸ್ ಕಾರಣವಾಗಿದೆ ಎಂದು ಹೇಳಲಾಗಿದೆ. ರೋಗಿಯು ಇತ್ತೀಚೆಗಷ್ಟೇ ದುಬೈನಿಂದ ಕರ್ನಾಟಕಕ್ಕೆ ಮರಳಿದ್ದರು ಎಂದು ವರದಿಯಾಗಿದೆ. ಆದರೆ, ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ದೃಢಪಡಿಸಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು, "ಕಲಬುರ್ಗಿಯಲ್ಲಿ ನಿಧನರಾದ ಶ್ರೀ ಮೊಹಮ್ಮದ್ ಹುಸ್ಸೈನ್ ಸಿದ್ದಿಕಿ #COVID19 ಶಂಕಿತರೆ ಹೊರತು ದೃಢಪಟ್ಟಿಲ್ಲ. ನಾಗರಿಕರ ಹಿತ ದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕಾಗಿ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ಜಿಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ #COVIDUPDATE" ಎಂದು ಬರೆದುಕೊಂಡಿದಾರೆ.
ಇದಲ್ಲದೆ, ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಕೆಲವು ಯುರೋಪಿಯನ್ ರಾಷ್ಟ್ರಗಳ ವೀಸಾಗಳನ್ನು ರದ್ದುಗೊಳಿಸಿದೆ. ಮಂಗಳವಾರ, ಭಾರತ ಸರ್ಕಾರ ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್‌ನ ನಾಗರಿಕರ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಈ ದೇಶಗಳ ನಾಗರಿಕರಿಗೆ ಪ್ರಸ್ತುತ ಭಾರತಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಭಾರತದಲ್ಲಿ ಈಗ ಸುಮಾರು 50 ಧನಾತ್ಮಕ ಕರೋನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವರಲ್ಲಿ ಸುಮಾರು 34 ಜನರು ಭಾರತೀಯರಾಗಿದ್ದರೆ, 16 ಜನ ಇಟಲಿ ನಾಗರಿಕರಾಗಿದ್ದಾರೆ.