Cyclone Mocha News : ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಚಂಡಮಾರುತ ಬೀಸುವ ಸೂಚನೆಗಳಿವೆ. ಈ ಹಿನ್ನೆಲೆಯಲ್ಲಿ ಮೇ 7 ರಿಂದ 11 ರವರೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶಕ್ಕೆ ತೆರಳದಂತೆ ಮೀನುಗಾರರು ಮತ್ತು ಹಡಗುಗಳಿಗೆ  ಮುನ್ನೆಚ್ಚರಿಕೆ  ನೀಡಲಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಚಂಡಮಾರುತ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ.


COMMERCIAL BREAK
SCROLL TO CONTINUE READING

ವರ್ಷದ ಮೊದಲ ಚಂಡಮಾರುತ : 
ಚಂಡಮಾರುತವು 2023 ರ ಮೊದಲ ಚಂಡಮಾರುತವಾಗಿದೆ. ಚಂಡಮಾರುತಕ್ಕೆ 'ಮೋಚಾ' ಎಂದು ಹೆಸರಿಡಲಾಗಿದೆ. ಕೆಂಪು ಸಮುದ್ರದ ತೀರದಲ್ಲಿರುವ ತನ್ನ ಬಂದರು ನಗರಗಳಲ್ಲಿ ಒಂದಾದ 'ಮೋಚಾ' ಹೆಸರನ್ನು ಯೆಮೆನ್ ಈ ಚಂಡಮಾರುತಕ್ಕೆ ಸೂಚಿಸಿದೆ. ಚಂಡಮಾರುತಗಳನ್ನು ಹೆಸರಿಸುವ ವ್ಯವಸ್ಥೆಯನ್ನು ವಿಶ್ವ ಹವಾಮಾನ ಸಂಸ್ಥೆಯ ಮೂಲಕ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಸದಸ್ಯ ರಾಷ್ಟ್ರಗಳು  ಪಾಲ್ಗೊಳ್ಳುತ್ತವೆ. ಈ ಚಂಡಮಾರುತದ ಹೆಸರನ್ನು  ಯೆಮೆನ್ ಸೂಚಿಸಿದೆ.


ಇದನ್ನೂ ಓದಿ Rain Update: ಮೇ 5ರವರೆಗೆ ರಾಜ್ಯದಲ್ಲಿ ಭಾರೀ ವರ್ಷಧಾರೆ: 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್! ಯಾವ್ಯಾವ ಜಿಲ್ಲೆಗಳಿವೆ?


ಹವಾಮಾನ ಇಲಾಖೆಯ ಅಂದಾಜು : 
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಅವರು ಮೇ 6 ರಂದು ಚಂಡಮಾರುತ ಏಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮೇ 8 ರಂದು ಕಡಿಮೆ ಒತ್ತಡದ ಪ್ರದೇಶ ಕೇಂದ್ರೀಕೃತವಾಗಿರುತ್ತದೆ ಮತ್ತು ಮೇ 9 ರಂದು ಚಂಡಮಾರುತವಾಗಿ ತೀವ್ರಗೊಳ್ಳುವ  ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಚಂಡಮಾರುತವು ಮಧ್ಯ ಬಂಗಾಳಕೊಲ್ಲಿಯತ್ತ ಚಲಿಸುವ ನಿರೀಕ್ಷೆಯಿದೆ ಎಂದು  ಹೇಳಿದ್ದಾರೆ. 


"ನಾವು ಸೈಕ್ಲೋನಿಕ್ ಏಳುವ ಮುಂಚಿತವಾಗಿ ಮುನ್ಸೂಚನೆಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಮೀನುಗಾರರು ಮತ್ತು ಹಡಗು ಈ ಸೂಚನೆಗಳಿಗೆ ಅನುಸಾರವಾಗಿ ತಮ್ಮ ಚಲನ ವಲನಗಳನ್ನು ಯೋಜಿಸಬಹುದು ಎಂದು ಮೃತ್ಯುಂಜಯ್ ಮಹಾಪಾತ್ರ  ಹೇಳಿದ್ದಾರೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. 


ಇದನ್ನೂ ಓದಿ : Cyberattack: ಸೈಬರ್ ದಾಳಿಗೆ ಮನನೊಂದು ಯುವತಿ ಆತ್ಮಹತ್ಯೆ..!


ಮೇ ತಿಂಗಳಲ್ಲಿ ಬೀಸಲಿವೆ ಹೆಚ್ಚಿನ ಚಂಡಮಾರುತ : 
ಮೇ ಮತ್ತು ಜೂನ್‌ನಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ  ಚಂಡಮಾರುತದ ಸಾಧ್ಯತೆ ಇದೆ.  ಈ ಬಾರಿ ಹೆಚ್ಚಿನ ಚಂಡಮಾರುತಗಳು ಮೇ ತಿಂಗಳಲ್ಲಿ ಬೀಸಲಿವೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.