Rajendra Prasad Death Anniversary: ಸ್ವಾತಂತ್ರ ಹೋರಾಟಕ್ಕೆ ಧುಮುಕಿ ಚಳವಳಿಯಲ್ಲಿ ಭಾಗಿಯಾಗಿ, ಮೊದಲ ರಾಷ್ಟ್ರಪತಿಯಾಗಿರುವ ಡಾ.ಬಾಬು ರಾಜೇಂದ್ರ ಪ್ರಸಾದ್‌ ರವರ ಪುಣ್ಯ ಸ್ಮರಣೆಯ ದಿನವಾಗಿದೆ. ಡಾ.ಬಾಬು ರಾಜೇಂದ್ರ ಪ್ರಸಾದ್‌ ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ...


COMMERCIAL BREAK
SCROLL TO CONTINUE READING

ರಾಜೇಂದ್ರ ಪ್ರಸಾದ್‌ರವರು ಡಿಸೆಂಬರ್‌ 03 ರಂದು ಬಿಹಾರದ ಕಾಯಸ್ಥ ಕುಟುಂಬದಲ್ಲಿ ಜನಿಸಿದವರು. ತಂದೆ ಮಹಾದೇವ್‌ಸಹಾಯ್‌ ಅವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಪಂಡಿತರಾಗಿದ್ದರು. ತಾಯಿ ಕಮಲೇಶ್ವರಿ ದೇವಿಯು ತನ್ನ ಮಗನಿಗೆ ಕೇವಲ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳಿ ಧರ್ಮನಿಷ್ಠವಂತನಾಗಿ ಬೆಳೆಸಿದರು.


ಮೇಲು ಕೀಳು, ಬಡವ ಶ್ರೀಮಂತ ಯಾವುದೇ ಬೇಧ ಭಾವಗಳಿಲ್ಲದೆ ಆಡಂಬರದ ಇಲ್ಲದ ಗ್ರಾಮೀಣ ಜನರ ಒಡನಾಟದಲ್ಲಿ ಬೆಳದರು. 12ನೇ ವಯಸ್ಸಿನಲ್ಲೇ ರಾಜ ಬನ್ಸಿದೇವಿಯವರೊಂದಿಗೆ ರಾಜೇಂದ್ರ ಪ್ರಸಾದ್‌ ರ ಮದುವೆಯಾಯಿತು. 


ಇದನ್ನೂ ಓದಿ : Daily GK Quiz: ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು?


ರಾಜೇಂದ್ರ ಪ್ರಸಾದ್‌ ಸತತ ಎರಡು ಬಾರಿ ಭಾರತದ ರಾಷ್ಟ್ರಪತಿಯಾಗಿದ್ದಾರೆ. ಹಾಗೆಯೇ ಉಪ್ಪಿನ ಸತ್ಯಾಗ್ರಹದಲ್ಲಿ ಇವರ ಪಾತ್ರ ನಿಜಕ್ಕೂ ಮನ್ನಣೀಯ ಎಂದೇ ಹೇಳಬಹುದು.


1915ರ ಸಮಯದಲ್ಲಿ ಗಾಂಧೀಜಿ ಅವರ ಅನುಯಾಯಿಯಾಗಿದ್ದರು. ಗಾಂಧೀಜಿಯವರು “ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ "ಎಂದು ರಾಜೇಂದ್ರರವರ ಬಗ್ಗೆ ಹೇಳಿದ್ದಾರೆ. ಅದೆ ರೀತಿಯಾಗಿ ಒಮ್ಮೆ ಗಾಂಧಿ ನಿರ್ಧರಿಸಿದ ಮೇಲೆ ಅವರು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದರು, ಆದರೆ ಎಲ್ಲಿ ತಮ್ಮ ಮಾತಿನ ಅಗತ್ಯವಿರುತ್ತಿತ್ತೋ ಅಲ್ಲಿ ಮಾತಾಡದೇ ಇರುತ್ತಿರಲಿಲ್ಲಾ.   


ಆಹಾರ ಮತ್ತು ಕೃಷಿ ಸಚಿವರಾಗಿ 1946 ರಲ್ಲಿ ಆಯ್ಕೆಯಾಗಿ  "ಹೆಚ್ಚು ಆಹಾರವನ್ನು ಬೆಳೆಸಿಕೊಳ್ಳಿ" ಎಂಬ ಘೋಷಣೆಯನ್ನು ಸಹ ಜನರಿಗೆ ನೀಡಿದರು. ಪ್ರಪಂಚದ ಮೊಟ್ಟ ಮೊದಲಬಾರಿಗೆ 1950ರ  ಜನವರಿ 26ರಂದು ಭಾರತವು ಗಣರಾಜ್ಯವಾದಾಗ ಮೊಟ್ಟ ಮೊದಲಬಾರಿಗೆ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೀಗೆ ಸುಮಾರು 12 ವರ್ಷಗಳಕಾಲ ಇಡೀ ದೇಶವನ್ನೆ ಆಳುತ್ತಿದ್ದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರವರ ಪಾತ್ರ ಅಪಾರ.1962ರಲ್ಲಿ ರಾಷ್ಟ್ರಪತಿ ಸ್ಥಾನದಿಂದ ನಿವೃತ್ತವನ್ನು ಸ್ವೀಕರಿಸಿದ ಇವರು, ತಾವೇ ಸ್ವತಃ ಪಾಟ್ನಾದಲ್ಲಿ ನಿರ್ಮಿಸಿದ ಸದಾಕತ್‌ ಆಶ್ರಮದಲ್ಲಿ ತಮ್ಮ ಜೀವನವನ್ನ ಕಳೆದಿದ್ದಾರೆ.   


ಇದನ್ನೂ ಓದಿ : Daily GK Quiz: ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಥಮ ಸಂಸದ ಯಾರು..?


ಸ್ವಾತಂತ್ರ ಹೋರಾಟಗಾರನಾಗಿ  ಹಾಗೂ ಸಮಾಜ ಸೇವಕರಾಗಿ ಮಿಂಚಿದ ರಾಜೇಂದ್ರ ಪ್ರಸಾದ್‌ ಅವರಿಗೆ 1962 ಅತ್ಯುನ್ನತ ನಾಗರಿಕ ಪ್ರಶಸ್ತಿ“ಭಾರತ ರತ್ನ” ನೀಡಲಾಯಿತು. 1963ರ ಫೆಬ್ರವರಿ 28ರಂದು ನಿಧನರಾದರು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.