ಭಾರತ ನಿರ್ಮಿತ ಅಗ್ನಿ-5 ಕ್ಷಿಪಣಿ `ಮಿಷನ್ ದಿವ್ಯಾಸ್ತ್ರ` ಮೊದಲ ಪ್ರಾಯೋಗಿಕ ಪರೀಕ್ಷೆ ಯಶಸ್ವಿ : ಪ್ರಧಾನಿ ಮೋದಿ
ಭಾರತ ನಿರ್ಮಿತ ಅಗ್ನಿ-5 ಕ್ಷಿಪಣಿ `ಮಿಷನ್ ದಿವ್ಯಾಸ್ತ್ರ` ಮೊದಲ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿದ್ದಾರೆ.
Mission Divyastra : ದೇಶದ ರಕ್ಷಣಾ ವಲಯದ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ 'ಮಿಷನ್ ದಿವ್ಯಾಸ್ತ್ರ' ಪ್ರಯೋಗ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿದ್ದು, ರಕ್ಷಣಾ ಸಚಿವರು ಸೇರಿದಂತೆ ಹಲವಾರು ಗಣ್ಯರು ಡಿಆರ್‌ಡಿಓಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಮೂಲಕ ಈ ಘೋಷಣೆಯನ್ನು ಮಾಡಿದ್ದಾರೆ. ಡಿಆರ್‌ಡಿಓ ಅಭಿವೃದ್ಧಿಗೊಳಿಸಿರುವ ಭಾರತ ನಿರ್ಮಿತ ಅಗ್ನಿ-5 ಕ್ಷಿಪಣಿ 'ಮಿಷನ್ ದಿವ್ಯಾಸ್ತ್ರ' ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಘೋಷಿಸಿದರು. ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನ (Multiple Independently Targetable Re-entry Vehicle MIRV) ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಕ್ಷಿಪಣಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಮೋದಿ ಹೇಳಿದರು.
ಇದನ್ನು ಓದಿ : Job Fraud Alert: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ!
'ಮಿಷನ್ ದಿವ್ಯಾಸ್ತ್ರ' ಭಾರತೀಯ ರಕ್ಷಣಾ ವಲಯದಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ. ಈ ಯೋಜನೆಯ ನಿರ್ದೇಶಕರು ಓರ್ವ ಮಹಿಳೆ ಎಂಬುದು ಮತ್ತೊಂದು ವಿಶೇಷವಾಗಿದೆ. ಸೋಮವಾರ ಭಾರತ ಈ ಪರೀಕ್ಷೆಯನ್ನು ನಡೆಸುವ ಮೂಲಕ ಎಂಐಆರ್‌ವಿ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದು, ರಕ್ಷಣಾ ವಲಯದ ಪಾಲಿಗೆ ಮಹತ್ವದ ದಿನವಾಗಿದೆ.
Vande Bharat Express : ವಂದೇ ಭಾರತ್ ಸ್ಲೀಪರ್ ರೈಲು, ನಿರ್ವಹಣಾ ವಿಶೇಷ ಕೇಂದ್ರ ಸ್ಥಾಪನೆಗೆ 270 ಕೋಟಿ ಮಂಜೂರು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೋಸ್ಟ್ ಹಾಕಿ, 'ಎಂಐಆರ್‌ವಿ ತಂತ್ರಜ್ಞಾನದೊಂದಿಗೆ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆ ಮಿಷನ್ ದಿವ್ಯಾಸ್ತ್ರವನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಿಸಿದೆ ಮತ್ತು ಈ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿದೆ. ಡಿಆರ್‌ಡಿಓಗೆ ಅಭಿನಂದನೆಗಳು. ಈ ಅಸಾಧಾರಣ ಯಶಸ್ಸಿಗೆ ವಿಜ್ಞಾನಿಗಳು ಮತ್ತು ಇಡೀ ತಂಡ. ಅವರ ಬಗ್ಗೆ ಭಾರತ ಹೆಮ್ಮೆಪಡುತ್ತದೆ' ಎಂದು ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.