ಬುಲಂದ್​ಶಹರ್: ಇಲ್ಲಿನ ಅನೂಪ್ ಶಹರ್ ಕ್ಷೇತ್ರದ ಸೂರಜ್ಪುರದಲ್ಲಿರುವ ಕಾಲುವೆಗೆ ನಿಯಂತ್ರಣ ತಪ್ಪಿದ ಕಾರೊಂದು ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಈ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಅಪಘಾತಕ್ಕೀಡಾದ ಕಾರು ಮುರಾದಾಬಾದ್ ನಿಂದ ಆಲಿಗಢ ಮಾರ್ಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ. ಮೃತಪಟ್ಟವರಲ್ಲಿ ಇಬ್ಬರು ಬುಲಂದ್​ಶಹರ್ ಮತ್ತು ಮೂವರು ಮೊರಾದಾಬಾದ್ ನಿವಾಸಿಗಳು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ನಿಂತಿದ್ದವರೂ ಸಹ ಕಾರಿನ ಜೊತೆ ಕಾಲುವೆಗೆ ಬಿದ್ದಿದ್ದಾರೆ ಎನ್ನಲಾಗಿದೆ. 


ಕೂಡಲೇ ಸ್ಥಳಕಕಗಮಿಸಿದ ಪೊಲೀಸರು ಮತ್ತು ಈಜುಗಾರರ ತಂಡ ನೀರಿನಲ್ಲಿ ಮುಳುಗಿರುವ ಇತರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸಹ ಇದ್ದು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಜನರ ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.