ಜಾರ್ಖಂಡ್ ನಲ್ಲಿ ಐವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ
ರಾಂಚಿ: ಎನ್ ಜಿ ಓ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಾರ್ಖಂಡ್ ನ ಚೋಚಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಎನ್.ಜಿ.ಓ ಪರ ವಲಸೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಜಾರ್ಖಂಡ್ ನ ಚೋಚಾಂಗ್ ಹಳ್ಳಿಗೆ ತೆರಳಿದ್ದಾಗ ಕನಿಷ್ಠ ಐವರು ವ್ಯಕ್ತಿಗಳ ಗುಂಪೊಂದು ಐವರ ಮಹಿಳೆಯರ ಮೇಲೆ ಅತ್ಯಾಚಾರ ವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
'ಪಥಲ್ಗೇರಿ' ಜನರು ಮಂಗಳವಾರದಂದು ಖುಂಟಿ ಜಿಲ್ಲೆಯ ಘಟನೆಯ ಹಿಂದಿದ್ದಾರೆ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಡಿಐಜಿಪಿ ಅಮೋಲ್ ವಿ ಹೋಮ್ಕರ್ ತಿಳಿಸಿದ್ದಾರೆ.ಎಸ್ಪಿ ಅಶ್ವಿನಿ ಕುಮಾರ್ ಸಿನ್ಹಾ ಹೇಳುವಂತೆ, ಎನ್.ಜಿ.ಓ ದ 11 ಸದಸ್ಯರ ತಂಡವು ವಲಸೆ ಮತ್ತು ಮಾನವ ಕಳ್ಳಸಾಗಣೆಗೆ ಕುರಿತಾದ ಬೀದಿ ನಾಟಕ ಪ್ರದರ್ಶಿಸಲು ಆ ಗ್ರಾಮಕ್ಕೆ ತೆರಳಿದಾಗ ಈ ಘಟನೆ ಸಂಬವಿಸಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿನ ಅಪರಾಧಿಗಳನ್ನು ಗುರುತಿಸಿ ಸುಮಾರು ಎಂಟು ಜನರನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ಕುರಿತಾಗಿ ಸಮಗ್ರ ತನಿಖೆ ನಡೆಸಲು ಮೂರು ತಂಡಗಳು ರಚನೆಯಾಗಿದೆ ಎಂದು ತಿಳಿದುಬಂದಿದೆ. ಅತ್ಯಾಚಾರವಾದ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.