ನವದೆಹಲಿ:  ಐದು ಹಂತದ ಮತದಾನದ ನಂತರ ಎನ್ಡಿಎ ಕಥೆ ಮುಗಿದಿದೆ. ಇದಕ್ಕೆ ಪ್ರಮುಖ ಕಾರಣ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡುವಿನ ಸಂಘರ್ಷ ಎಂದು ಆರ್ಜೆಡಿ ನಾಯಕ ತೇಜಶ್ವಿ ಯಾದವ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ಏಳು ಹಂತಗಳಲ್ಲಿ ಐದು ಹಂತದ ಚುನಾವಣೆಗಳು ಮುಗಿದಿದೆ. ಜೊತೆಗೆ ಎನ್ಡಿಎ ಕಥೆ ಕೂಡ ಮುಗಿದಿದೆ. ಮೇ 23 ರಂದು ಬಿಜೆಪಿ ಸೋತು ಹೋಗಿರುತ್ತದೆ. ಬಿಹಾರದಲ್ಲಿ ಎನ್ಡಿಎಯೊಳಗೆ ಆಂತರಿಕ ಸಂಘರ್ಷವಿದೆ.ನೀತಿಶ್ ಕುಮಾರ್ ತಮ್ಮ ಕಾರ್ಯಕರ್ತರಿಗೆ ತಮ್ಮನ್ನು ಪ್ರಧಾನಿ ಎಂದು ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ನೀತಿಶ್ ಕುಮಾರ್ ಮತ್ತು ಮೋದಿ ಇಬ್ಬರೂ ದುರಾಸೆಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ಅವರ ಒಕ್ಕೂಟದಲ್ಲಿ ನಂಬಿಕೆಯ ಕೊರತೆ ಇದೆ ಎಂದು ತೇಜಸ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 


ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ಬಿಜೆಪಿಯ ಮೀಸಲಾತಿ-ವಿರೋಧಿ ನಿರ್ಧಾರಗಳಿಂದಾಗಿ ಅಂತಹ ದೊಡ್ಡ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ಅವರು ಹೇಳಿದರು."ಕುಶ್ವಾಹ, ದಂಗಿ, ಪಟೇಲ್ ಮತ್ತು ಅಹಿರ್ ಗೆ ಇದ್ದ  ಉಪ-ಕೋಟಾ ಮೀಸಲಾತಿಯನ್ನು ಕೇಂದ್ರ ಸರ್ಕಾರ ಏಕೆ ತೆಗೆದುಹಾಕಿತ್ತು ಎಂದು ನಾನು ಅಮಿತ್ ಷಾಗೆ ಕೇಳಲು ಬಯಸುತ್ತೇನೆ ಎಂದು ತೇಜಸ್ವಿ ಯಾದಬ್ ಪ್ರಶ್ನಿಸಿದರು.