Old ನಿಂದ Obsolete ಅಂಚಿನಲ್ಲಿ Congress ಪಕ್ಷ, ಗಾಂಧಿ ಕುಟುಂಬಕ್ಕೂ ಮುಂದೆ ಹೋಗಿ ಯೋಚಿಸಬೇಕಿದೆ!
Five State Assembly Elections Result 2022 - ಕಾಂಗ್ರೆಸ್ (Congress Party) ಪಾಲಿಗೆ ಇಂದು ಆತ್ಮಾವಲೋಕನದ ದಿನವಾಗಿದೆ. ಇಂದಿನಿಂದಲೇ ಪಕ್ಷ 2024ರ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವ ಸಮಯವಾಗಿದೆ.
Five State Assembly Elections Result 2022 - ಯುಪಿ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ಫಲಿತಾಂಶಗಳು (Five State Assembly Elections Result 2022) ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ. ಭಾರತದ ಅತ್ಯಂತ ಹಳೆಯ ಪಕ್ಷದ ಸ್ಥಿತಿ ಹಳೇ ಎಂಜಿನ್ ಇರುವ ಕಾರಿನಂತಾಗುತ್ತಿದೆ. ಹೊರ ಬೀಳುತ್ತಿರುವ ಫಲಿತಾಂಶಗಳು ಇದನ್ನು ಸಾರಿ ಹೇಳುತ್ತಿವೆ.
ಈ ಇಡೀ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಕಾರ್ಯಕರ್ತರು ಒಂದೇ ಒಂದು ಬಾರಿ ಆತ್ಮವಿಶ್ವಾಸವನ್ನು ಕಂಡುಕೊಂಡಿದ್ದಾರೆ, ಅದೇನೆಂದರೆ, ಅದು ಪ್ರಿಯಾಂಕಾ ಗಾಂಧಿಯವರು (Priyanka Gandhi) "ಲಡಕಿ ಹೂಂ, ಲಡ್ ಸಕ್ತಿ ಹೂಂ " ರ‌್ಯಾಲಿ ಕಹಳೆ ಮೊಳಗಿದ ವೇಳೆ ಮಾತ್ರ. ಆದರೆ ಈ ರ‌್ಯಾಲಿಯ ಬಳಿಕವೂ ಕೂಡ ಪ್ರಿಯಾಂಕಾ ತಮ್ಮನ್ನು ತಾವು ಸಿಎಂ ಸ್ಥಾನದ ಅಭ್ಯರ್ಥಿ ಎಂದು ಹೇಳಿಕೊಳ್ಳಲಿಲ್ಲ.
ಕಾಂಗ್ರೆಸ್ ಸೋಲುವುದು ನಿಶ್ಚಿತ ಎಂಬಂತೆ ಗೋಚರಿಸುತ್ತಿತ್ತು, ರಾಹುಲ್ ಗಾಂಧಿ (Rahul Gandhi) ಐಸ್ ಕ್ರೀಮ್ ತಿನ್ನುತ್ತಿರುವ ಫೋಟೋ ಇಂದು ಅನೇಕ ಕಾಂಗ್ರೆಸ್ಸಿಗರ ಹೃದಯವನ್ನು ಸುಡುತ್ತಿದೆ ಎಂಬುದು ಇದರಿಂದ ಅರ್ಥಮಾಡಿಕೊಳ್ಳಬಹುದು. ಆದರೆ, ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದೇ ಈ ರಾಷ್ಟ್ರೀಯ ಪಕ್ಷದ ಮುಂದಿರುವ ದೊಡ್ಡ ಸವಾಲಾಗಿದೆ. ಪಕ್ಷದೊಳಗೆ ತೀವ್ರತರವಾದ ಚಿಂತನೆ ನಡೆಯುತ್ತಿರುವುದು ಇದೀಗ ಸ್ಪಷ್ಟವಾಗಿದೆ. ಪಕ್ಷದಲ್ಲಿರುವ ಸಮಸ್ಯೆಗಳು ಬಗೆಹರಿಯದೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಹಾದಿ ಇನ್ನಷ್ಟು ಕಷ್ಟಕರವಾಗಲಿದೆ.
ಭವಿಷ್ಯದ ಬಗ್ಗೆ ಚಿಂತೆ
ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಮತ್ತು ಸಚಿನ್ ಪೈಲಟ್ (Sachin Pilot) ಅವರಂತೆ ಜಾಕೆಟ್ ಧರಿಸಿ ಹೆಜ್ಜೆ ಹಾಕಿದಾಗ ರಾಹುಲ್ ಗಾಂಧಿ ಬಲಿಷ್ಠ ಮತ್ತು ಆತ್ಮವಿಶ್ವಾಸದಿಂದ ತುಂಬಿದ ನಾಯಕರಂತೆ ತೋರುತ್ತಿದ್ದರು. ಈ ಮೂವರು ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಜಯ ತಂದುಕೊಟ್ಟಿದ್ದರು. ಆದರೆ ಇದೀಗ ಮತ್ತೊಮ್ಮೆ ಇತಿಹಾಸ, ವರ್ತಮಾನದ ಮೇಲೆ ಮೇಲುಗೈ ಸಾಧಿಸಿದ್ದು, ರಾಹುಲ್ ಜೊತೆಗೆ ಹೆಜ್ಜೆ ಹಾಕಿದ್ದ ಈ ಇಬ್ಬರೂ ನಾಯಕರಿಗೆ ಇಂದಿಗೂ ಕೂಡ ಸಿಎಂ ಕುರ್ಚಿ ಸಿಕ್ಕಿಲ್ಲ ಎನ್ನುವುದು ಮಾತ್ರ ವಿಪರ್ಯಾಸ.
ಆ ನಂತರ ನಡೆದದ್ದು ಯಾರಿಂದಲೂ ಮರೆಮಾಚಲು ಸಾಧ್ಯವಿಲ್ಲ. ರಾಜಸ್ಥಾನದಲ್ಲಿ ಪಕ್ಷದ ಒಳಜಗಳಗಳು ಮತ್ತು ಮಧ್ಯಪ್ರದೇಶದಲ್ಲಿ ಸರ್ಕಾರದ ಪತನದ ಕಾರಣಗಳು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯಲ್ಲಿಯೇ ಅಡಗಿದೆ ಎಂದು ಆರೋಪಿಸಲಾಯಿತು. ಪಕ್ಷ ಭೂತಕಾಲದ ರಾಜಕೀಯದಲ್ಲಿ ಸಿಲುಕಿಕೊಂಡು ಒಂದು ಅತ್ಯುತ್ತಮ ಸುವರ್ಣಾವಕಾಶ ಕಳೆದುಕೊಂಡಿತು. ಪ್ರಸ್ತುತ ಸಮಯದಲ್ಲಿ ಪಕ್ಷದ ಭವಿಷ್ಯವನ್ನು ರೂಪಿಸುವ ಯಾವುದೇ ಹೆಸರು ಕಾಂಗ್ರೆಸ್ ಬಳಿ ಇಲ್ಲ.
ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಲವಿದು
ಪಂಜಾಬ್ ನಲ್ಲಿ ನವಜೋತ್ ಸಿಂಗ್ ಸಿದ್ಧು ಅವರು ಯಾವ ರೀತಿ ಪಕ್ಷದ ಹೈಕಮಾಂಡ್ ಆದೇಶ ಮತ್ತು ಅದರ ನಾಯಕತ್ವವನ್ನು ಲೇವಡಿ ಮಾಡಿದರೋ, ಆ ದುಸ್ಸಾಹಸ ಬಿಜೆಪಿಯಲ್ಲಿ ಯಾರೂ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತ ಶಿಸ್ತಿನ ಭಾರಿ ಕೊರತೆ ಇದೆ ಹಾಗೂ ಪಕ್ಷವನ್ನು ಒಂದೇ ಸೂತ್ರದಲ್ಲಿ ಕಟ್ಟುವವರು ಯಾರೂ ಇಲ್ಲ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಕಠಿಣ ನಿರ್ಧಾರಗಳನ್ನು ಕೈಗೊಂಡು ಪಕ್ಷವನ್ನು ಪುನರುಜೀವನಗೊಳಿಸುವ ಅವಶ್ಯಕತೆ ಇದೆ.
ಗಾಂಧಿ ಕುಟುಂಬದಿಂದ ಮುಂದೆ ಬಂದು ಗ್ರೌಂಡ್ ವರ್ಕ್ ಮಾಡಬೇಕಿದೆ
ಕಾಂಗ್ರೆಸ್‌ನ ಸಮಸ್ಯೆ ಏನೆಂದರೆ, ಅದರ ಕಾರ್ಯಕರ್ತರು ಇದೀಗ ಜನರ ನಡುವೆ ಕಡಿಮೆ ಮತ್ತು ಕಚೇರಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ರ್ಯಾಲಿಗಳನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ಮುಖಂಡರು ಜನರ ಸಮಸ್ಯೆಗಳು ಮತ್ತು ಜನರ ಬಳಿ ತಲುಪುತ್ತಿಲ್ಲ. ಯುಪಿ ಚುನಾವಣೆಯ ಸಮಯದಲ್ಲಿ ಪ್ರಚಾರ ಮಾಡುವುದನ್ನು ಬಿಟ್ಟರೆ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಪ್ರಚಾರದ ಮೊದಲು ಜನರ ಮಧ್ಯದಿಂದ ಕಾಣೆಯಾಗಿದ್ದರು.
ಇದನ್ನೂ ಓದಿ-ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ -ರಾಹುಲ್ ಗಾಂಧಿ
ಕೆಲವು ಸಂದರ್ಭಗಳಲ್ಲಿ, ಒಂದೆರಡು ಬಾರಿ ರಾಹುಲ್ ಮತ್ತು ಪ್ರಿಯಾಂಕಾ ಖಂಡಿತವಾಗಿ ಜನರ ಮಧ್ಯೆ ಕಾಣಿಸಿಕೊಂಡರಾದರೂ ಕೂಡ, ಈ ಫೋಟೋ ಆಪ್‌ಗಳ ಹೊರಗೆ ಕಾಂಗ್ರೆಸ್ ಗೆ ತನ್ನ ಅಸ್ತಿತ್ವ ನೋಂದಾಯಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್, ಸೋಶಿಯಲ್ ಮೀಡಿಯಾ ಸೆಲ್‌ನಿಂದ ಹಿಡಿದು ಕಾರ್ಯಕರ್ತರವರೆಗೆ, ನೆಲದ ಸಮಸ್ಯೆಗಳನ್ನು ಬಗೆಹರಿಸದೆ, ಕೇವಲ ಟ್ವಿಟರ್ ಮೂಲಕ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ -Arvind Kejriwal : ಮೊಬೈಲ್ ರಿಪೇರಿ ಮಾಡಿದವನು ಸಿಎಂ ಚನ್ನಿಯನ್ನು ಸೋಲಿಸಿದ : ಸಿಎಂ ಕೇಜ್ರಿವಾಲ್
ಕಾಂಗ್ರೆಸ್ ಪಾಲಿಗೆ ಇಂದಿನ ಆತ್ಮಾವಲೋಕನದ ದಿನವಾಗಿದೆ, ಪಕ್ಷ ಇಂದಿನಿಂದಲೇ 2024ರ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಪಕ್ಷದ ಬಳಿ ಯುವ ನಾಯಕರೂ ಇಲ್ಲ, ಕೇಡರ್‌ನಲ್ಲಿ ಶಿಸ್ತು ಇಲ್ಲ. ಈ ಪಕ್ಷವು Old ನಿಂದ Obsolete ಅಂಚಿನಲ್ಲಿದೆ, ಹೊಸ ನಾಯಕತ್ವದಲ್ಲಿ ಇಂದಿನಿಂದಲೇ ಪಕ್ಷ ಹೂಡಿಕೆ ಮಾಡಬೇಕಿದೆ.ಇಲ್ಲದಿದ್ದರೆ ನಾವು ನಮ್ಮ ಮುಂದಿನ ಪೀಳಿಗೆಗೆ ಗಾಂಧಿ-ನೆಹರುಗಳ ಜೊತೆಗೆ ಕಾಂಗ್ರೆಸ್ ಪಕ್ಷದ ಇತಿಹಾಸ ಹೇಳಿಕೊಡುವ ದಿನ ಎದುರಾಗಲಿದೆ.
ಇದನ್ನೂ ಓದಿ-Election Result 2022: ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ, ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.