Election Dates 2022: ಭಾರತದ ಚುನಾವಣಾ ಆಯೋಗವು  (Election Commission Of India) ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ (Election Dates Announce). ಕೊರೊನಾ ಅವಧಿಯಲ್ಲಿ ಈ ಚುನಾವಣೆಗಳನ್ನು (Assembly Elections 2022)  ಆಯೋಜಿಸುವುದು ಚುನಾವಣಾ ಆಯೋಗ ಪಾಲಿಗೆ  ಸುಲಭದ ಕೆಲಸವಲ್ಲ. ಆದ್ದರಿಂದ, ಕರೋನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಆಯೋಗವು ಮೊದಲ ಬಾರಿಗೆ ಹಲವು ಪ್ರಯತ್ನಗಳನ್ನು ಮಾಡಲು ಹೊರಟಿದೆ. ಈ ಬಾರಿಯ ಚುನಾವಣೆ ಡಿಜಿಟಲ್ ಕೇಂದ್ರಿತವಾಗಿರುತ್ತದೆ. ಜನರು ಪರಸ್ಪರ ಕನಿಷ್ಠ ಸಂಪರ್ಕ ಹೊಂದಲು ಅನೇಕ ಅಪ್ಲಿಕೇಶನ್‌ಗಳನ್ನು ಸಹ ಪ್ರಾರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ರೀತಿ ಆಗುತ್ತಿರುವುದು ಇದೇ ಮೊದಲು
1. ವರ್ಚುವಲ್ ರ‍್ಯಾಲಿಗೆ ಸಲಹೆ -
ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಸುಶೀಲ್ ಚಂದ್ರ (Susheel Chandra) ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ವರ್ಚುವಲ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದ್ದಾರೆ. 15 ಜನವರಿ 2022 ರವರೆಗೆ ಯಾವುದೇ ರೋಡ್‌ಶೋ, ಪಾದಯಾತ್ರೆ, ಸೈಕಲ್ ರ‍್ಯಾಲಿ, ಬೈಕ್ ರ‍್ಯಾಲಿ ಮತ್ತು ಮೆರವಣಿಗೆಗೆ ಅನುಮತಿ ನೀಡಲಾಗುವುದಿಲ್ಲ. ನಂತರ ಚುನಾವಣಾ ಆಯೋಗವು ಪರಿಸ್ಥಿತಿಯನ್ನು ಪರಿಶೀಲಿಸಿ, ಹೊಸ ಸೂಚನೆಗಳನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ. ರ‍್ಯಾಲಿಗಳು ಮತ್ತು ವರ್ಚುವಲ್ ರ‍್ಯಾಲಿಯನ್ನು ನಡೆಸುವಂತೆ ಆಯೋಗ ಮನವಿ ಮಾಡಿದ್ದು ಇದೇ ಮೊದಲು ಎಂಬುದು ಇಲ್ಲಿ ಗಮನಾರ್ಹ.


2. ಕೊರೊನಾ ಸೊಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ - ಚುನಾವಣಾ ಆಯೋಗವು ಸರ್ಕಾರಿ ನೌಕರರನ್ನು ಹೊರತುಪಡಿಸಿ 80 ವರ್ಷ ಮೇಲ್ಪಟ್ಟ ನಾಗರಿಕರು, ಅಂಗವಿಕಲರು ಮತ್ತು ಕರೋನಾ ಸೋಂಕಿತರಿಗೆ ಇದೇ ಮೊದಲಬಾರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಿದೆ. 


3. ಸುವಿಧಾ ಆಪ್ - ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗವು 'ಸುವಿಧಾ ಆಪ್' ಅನ್ನು ಬಿಡುಗಡೆ ಮಾಡಿದೆ, ತನ್ಮೂಲಕ  ಯಾವುದೇ ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿದೆ. ಇಂತಹ ಸೌಲಭ್ಯವನ್ನು ಕೂಡ ಆಯೋಗವು ಇದೇ ಮೊದಲ ಬಾರಿಗೆ ಮಾಡುತ್ತಿದೆ. 


ಇದನ್ನೂ ಓದಿ-ಪಂಚರಾಜ್ಯಗಳ ಚುನಾವಣೆ ಘೋಷಣೆ: ಯಾರಿಗೆ ಒಲಿಯಲಿದೆ ಪಂಚರಾಜ್ಯಗಳ ಗದ್ದುಗೆ?


4. Cvigil App - ಚುನಾವಣೆ ವೇಳೆ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಸಿವಿಜಿಲ್ ಆಪ್ ಬಿಡುಗಡೆ ಮಾಡಲಾಗಿದೆ. ತನ್ಮೂಲಕ ಅಕ್ರಮಗಳ ವಿರುದ್ಧ ದೂರು ದಾಖಲಿಸಲಾಗುವುದು. ಅಂದರೆ, ದೂರಿಗಾಗಿ ಆನ್‌ಲೈನ್ ವ್ಯವಸ್ಥೆಯನ್ನೂ ಮಾಡಲಾಗಿದೆ, ಇದು ಸಹ ಒಂದು ಹೊಸ ಪ್ರಯತ್ನವಾಗಿದೆ.


ಇದನ್ನೂ ಓದಿ -ಪಂಚ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ: ಏಳು ಹಂತದಲ್ಲಿ ಚುನಾವಣೆ


5. ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಕೇಂದ್ರಗಳು - ಕೊವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಈ ಬಾರಿ ಕೇವಲ 1250 ಮತದಾರರು ಮಾತ್ರ ಒಂದು ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಇದು ಕಳೆದ ಚುನಾವಣೆಗೆ ಹೋಲಿಸಿದರೆ ಮತಗಟ್ಟೆಗಳ ಸಂಖ್ಯೆಯನ್ನು ಶೇ.16ರಷ್ಟು ಹೆಚ್ಚಿಸಲಿದೆ. ಇದೆ ಮೊದಲ ಬಾರಿಗೆ ಯಾವುದೇ ಒಂದು ಚುನಾವಣೆಗಾಗಿ ಬೂತ್ ಗಳ ಸಂಖ್ಯೆಯನ್ನು ಇಷ್ಟೊಂದು ಸಂಖ್ಯೆಯಲ್ಲಿ ಹೆಚ್ಚಿಸಲಾಗಿದೆ. 


ಇದನ್ನೂ ಓದಿ-Good News: PM Awas ಯೋಜನೆಯ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ! ಎಲ್ಲರ ಮೇಲೂ ಪ್ರಭಾವ ಬೀರಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.