Five State Elections 2022 Big Update: ಪಂಚರಾಜ್ಯಗಳ ಚುನಾವಣೆಗಳ ರ್ಯಾಲಿ, ಸಾರ್ವಜನಿಕ ಸಭೆ, ರೋಡ್ ಷೋಗಳ ಮೇಲಿನ ನಿರ್ಬಂಧ ವಿಸ್ತರಣೆ
Assembly Elections 2022: ಕರೋನಾ ಸೋಂಕಿನ (Covid-19) ನಡುವೆ ನಡೆಯುತಿರುವ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ರ್ಯಾಲಿ (Election Rally)-ದೊಡ್ಡ ಸಾರ್ವಜನಿಕ ಸಭೆ ಮತ್ತು ರೋಡ್ಶೋಗೆ(Road Show) ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಬೇಕೇ ಎಂಬ ಕುರಿತು ಚುನಾವಣಾ ಆಯೋಗದ (Election Commission) ಸಭೆ ಇಂದು ನಡೆಯುತ್ತಿದೆ.
ನವದೆಹಲಿ: ಪಂಚರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಯ ಹಿನ್ನೆಲೆ ರ‍್ಯಾಲಿಗಳು ಹಾಗೂ ರೋಡ್ ಷೋಗಳ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಮುಂದುವರೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ಆಯೋಗದ (Election Commission)ಸಭೆಯಲ್ಲಿ ಇದನ್ನು ನಿರ್ಧರಿಸಲಾಗಿದೆ. ಆದರೆ, ಈ ಬಾರಿ ಪ್ರಚಾರದಲ್ಲಿ ರಾಜಕೀಯ ಪಕ್ಷಗಳಿಗೆ ಆಯೋಗ ಕೊಂಚ ಸಡಿಲಿಕೆ ನೀಡಿದೆ. ಈ ಮೊದಲು ಆಯೋಗ ಗರಿಷ್ಠ 300 ಜನರು ಅಥವಾ ಹಾಲ್ ಸಾಮರ್ಥ್ಯದ ಶೇ.50ರಷ್ಟು ಒಳಾಂಗಣ ಸಭೆಗಳಿಗೆ ಅನುಮತಿ ನೀಡಿತ್ತು.
ಎಸಿಬಿ ಮಿಂಚಿನ ಕಾರ್ಯಾಚರಣೆ; ಬೆಳಗಾವಿಯಲ್ಲಿ ಮುಜರಾಯಿ ಇಲಾಖೆ ತಹಶೀಲ್ದಾರ್ ಬಂಧನ
ಕೇಂದ್ರ ಆರೋಗ್ಯ ಸಚಿವರು, ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಆರೋಗ್ಯ ಸಚಿವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ಆಯೋಗದ ಈ ಸಭೆಯಿಂದ ದೊರೆತ ಮಾಹಿತಿ ಪ್ರಕಾರ, ರಾಜಕೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಯೋಗ ಹೇಳಿದೆ. ಇದಲ್ಲದೆ, ಕೋವಿಡ್ ನಿಯಮಗಳ ಉಲ್ಲಂಘನೆಯ ಪ್ರಕರಣಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಇದನ್ನೂ ಓದಿ-ಆಯುರ್ವೇದದಲ್ಲಿ ಹೇಳಲಾಗಿರುವ ಈ 5 ವಸ್ತುಗಳು ನಿಮ್ಮನ್ನು ಕೊರೊನಾದಿಂದ ರಕ್ಷಿಸುತ್ತವೆ
ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜನವರಿ 15 ರವರೆಗೆ ರ‍್ಯಾಲಿಗಳು ಮತ್ತು ದೊಡ್ಡ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ಚುನಾವಣಾ ಆಯೋಗವು ಈ ಹಿಂದೆ ನಿಷೇಧಿಸಿತ್ತು, ಬಳಿಕ ಅದನ್ನು ಆಯೋಗ ಜನವರಿ 22 ರವರೆಗೆ ವಿಸ್ತರಿಸಿತ್ತು. ಆದರೆ, ಇದೀಗ ಮತ್ತೆ ಚುನಾವಣಾ ಆಯೋಗ ಈ ನಿರ್ಬಂಧವನ್ನು ಜನವರಿ 31ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ-Facebook ಬಳಕೆದಾರರಿಗೊಂದು ಎಚ್ಚರಿಕೆ! ಈ ರೀತಿಯ Comment ನಿಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.