ಶೋಫಿಯಾನ: ಜಮ್ಮು ಕಾಶ್ಮೀರದ ಶೋಫಿಯಾನ ಪ್ರದೇಶದಲ್ಲಿ ಸುಮಾರು 6 ಗಂಟೆಗಳ ಕಾಲ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಭಾನುವಾರ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಬಲಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಪೋಲಿಸ್ ಮಹಾ ನಿರ್ದೇಶಕ ಶೇಶ್ ಪಾಲ್ ವೇದ್, ಐವರು ಉಗ್ರರು ಸಾವನ್ನಪ್ಪಿದ್ದು ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 



COMMERCIAL BREAK
SCROLL TO CONTINUE READING

ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್​ ಗಾಯಗೊಂಡಿದ್ದಾರೆ. ಇನ್ನೂ ಇಂಟರ್​ನೆಟ್​ ಸೇವೆ ಹಾಗೂ ರೈಲು ಸೇವೆಯನ್ನು ದಕ್ಷಿಣ ಕಾಶ್ಮೀರ ಭಾಗದಲ್ಲಿ ಸ್ಥಗಿತಗೊಳಿಸಲಾಗಿದೆ. 


ಹಿಜ್ಬುಲ್​ ಸಂಘಟನೆಯ ಪ್ರಮುಖ ಕಮಾಂಡರ್​ ಸದ್ದಾಮ್​ ಪಡ್ಡಾರ್​ ಹತನಾಗಿದ್ದು, ಈತ ಉಗ್ರರಾದ ಬರ್ಹಾನ್​ ವಾನಿ ಮತ್ತು ಆದಿಲ್​ ಮಲಿಕ್ ಸಹಾಯಕನಾಗಿದ್ದ. ಪ್ರಾಧ್ಯಾಪಕನಿಂದ ಉಗ್ರನಾಗಿ ಬದಲಾಗಿದ್ದ ರಫಿ ಭಟ್​ ಕೂಡ ಬಲಿಯಾಗಿದ್ದಾನೆ.