ನವದೆಹಲಿ: ಕೇರಳದಲ್ಲಿನ ಪ್ರವಾಹ ಮಾನವ ನಿರ್ಮಿತ ಎಂದು ಕಾಂಗ್ರೆಸ್ ಆರೋಪಿಸಿದೆ.ಅಲ್ಲದೆ ಇಲ್ಲಿನ ಎಡ ಸರಕಾರ ಅಣೆಕಟ್ಟುಗಳ ನಿರ್ವಹಣೆಯಲ್ಲಿ ಎಡವಿದ ಕಾರಣ ಈ ಭೀಕರ ಪ್ರವಾಹ ಉಂಟಾಗಿ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿಠಳಾ ಕೇರಳದಲ್ಲಿನ ಪ್ರವಾಹ ಮಾನವ ನಿರ್ಮಿತವಾಗಿದ್ದು ಆದ್ದರಿಂದ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.


ಆದರೆ ಕೇರಳದ ಅಣೆಕಟ್ಟುಗಳನ್ನು ನಿರ್ವಹಿಸುವ ಕೇರಳ ರಾಜ್ಯ ವಿದ್ಯುತ್ ಮಂಡಳಿ ಈ ಆರೋಪವನ್ನು ಅಲ್ಲಗಳೆದಿದೆ. ನೀರನ್ನು ಬಿಡುಗಡೆ ಮಾಡದಿರುವ ನಿರ್ಧಾರವನ್ನು  ವಿಪತ್ತು ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರವಷ್ಟೇ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.


ಎರಡು ವಾರಗಳ ಹಿಂದೆ ಪ್ರವಾಹ ಪ್ರಾರಂಭವಾಗಿದೆ, ಇದಕ್ಕೆ ಕಾರಣ ರಾಜ್ಯದಲ್ಲಿ ಧಾರಾಕಾರ ಮಳೆಯಾಗಿ ಸುಮಾರು 80 ಅಣೆಕಟ್ಟುಗಲು ಭರ್ತಿಯಾಗಿದ್ದವು ಅನಂತರ ಅಣೆಕಟ್ಟುಗಳ ಮೂಲಕ ನೀರನ್ನು ಹರಿಬಿಟ್ಟಿದ್ದರಿಂದಾಗಿ ಕೇರಳದ 14 ಜಿಲ್ಲೆಗಳಲ್ಲಿ 13 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ಸಿಕ್ಕು ನಲುಗುತ್ತಿವೆ.


ಇದರಿಂದಾಗಿ ಸುಮಾರು 1 ಮಿಲಿಯನ್ ಜನರು ತಮ್ಮ ಮನೆಗಳನ್ನು ಬಿಡಬೇಕಾಯಿತು, ಅಲ್ಲದೆ ರಸ್ತೆಗಳು, ಸೇತುವೆಗಳು,ರೈಲು ಮಾರ್ಗಗಳು ನಾಶವಾಗಿವೆ. ಸರ್ಕಾರದ ಅಂದಾಜಿನಂತೆ ಇದೆಲ್ಲವನ್ನು ಪುನರ್ನಿಮಿಸಲು ಕನಿಷ್ಠ ಎರಡು ವರ್ಷಗಳು ಹಿಡಿಯಲಿದೆ ಎಂದು ಹೇಳಿದೆ.