ನವದೆಹಲಿ: ಲಾಕ್ ಡೌನ್ ಕಾರಣದಿಂದ ದೇಶದಲ್ಲಿ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಕಾರಣ, ಆರ್ಥಿಕ ಸಂಕಷ್ಟ, ಇದೀಗ ಈ ನೌಕರರ ನೆರವಿಗೆ ಕೇಂದ್ರ ಸರ್ಕಾರ  ಮುಂದಾಗಿದೆ. ಕಳೆದ ಮಾರ್ಚ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಉದ್ಯೋಗ ಕಳೆದುಕೊಂಡ ನೌಕರರಿಗೆ, ಶೇ.12ರಷ್ಟು ಉದ್ಯೋಗಿಗಳಿಗೆ ಪಿಎಫ್(PF) ಮೊತ್ತವನ್ನು ಸರ್ಕಾರವೇ ಭರಿಸಲಿರುವುದಾಗಿ ಘೋಷಿಸಿದೆ. ಈ ಮೂಲಕ ಉದ್ಯೋಗ ಕಳೆದುಕೊಂಡವರಿಗೆ ಗುಡ್ ನ್ಯೂಸ್ ನೀಡಿದೆ.


COMMERCIAL BREAK
SCROLL TO CONTINUE READING

PUBG ಪ್ರಿಯರಿಗೆ ಸಿಹಿ ಸುದ್ದಿ‌: ಹೊಸ 'ಟೇಲರ್ಡ್' ಜೊತೆಗೆ ಮತ್ತೆ ಭಾರತದಲ್ಲಿ ರಿಲಾಂಚ್ ಆಗಲಿದೆ  ʼPUBG ಗೇಮ್ʼ


ಇಂದು ಆತ್ಮ ನಿರ್ಭಾರ್ ಭಾರತ್-3 ಯೋಜನೆಯ ಘೋಷಿಸುವ ಸಂಬಂಧ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ ಮಾರ್ಚ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಉದ್ಯೋಗ ಕಳೆದುಕೊಂಡ, ತಿಂಗಳಿಗೆ 15 ಸಾವಿರ ರೂಗಳಿಗೂ ಕಡಿಮೆ ವೇತನ ಪಡೆಯುತ್ತಿದ್ದಂತ ಉದ್ಯೋಗಿಗಳಿಗೂ ಇಪಿಎಫ್(EPF) ಸೌಲಭ್ಯ ಸಿಗಲಿದೆ ಎಂಬುದಾಗಿ ಘೋಷಿಸಿದಿದ್ದಾರೆ.


ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಗಮನಕ್ಕೆ


ಇಪಿಎಫ್‌ಓ(EPFO)ನಲ್ಲಿ ರಿಜಿಸ್ಟರ್ ಆಗಿರುವ ಕಂಪನಿಯ ಹೊಸ ಉದ್ಯೋಗಿಗಳಿಗೆ ಪಿಎಫ್ ಸಬ್ಸಿಡಿಯನ್ನು ಘೋಷಿಸಿದ ಅವರು, ಒಂದು ಸಾವಿರ ಅಥವಾ ಅದಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳಿಗೆ ಮುಂದಿನ 2 ವರ್ಷಗಳ ಕಾಲ ಪಿಎಫ್ ಸಬ್ಸಿಡಿ ಸಿಗಲಿದೆ. ಶೇ.12ರಷ್ಟು ಕಂಪನಿ ಮತ್ತು ಶೇ.12ರಷ್ಟು ಉದ್ಯೋಗಿಯ ಪಿಎಫ್ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂಬುದಾಗಿ ಘೋಷಿಸಿದ್ದಾರೆ.


ಶಾಲಾ ಪುನರಾರಂಭ ನಿರ್ಧಾರದಿಂದ ಹಿಂದೆ ಸರಿದ ತಮಿಳುನಾಡು