ನವದೆಹಲಿ: ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಆರ್ಜೆಡಿ ಮುಖ್ಯಸ್ಥ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ.  89 ಲಕ್ಷ ಅಕ್ರಮ ಹಿಂತೆಗೆದುಕೊಳ್ಳುವ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಡಿಸೆಂಬರ್ 23 ರಂದು ಲಾಲೂ ಸೇರಿದಂತೆ 16 ಮಂದಿಗೆ ಶಿಕ್ಷೆಗೊಳಪಡಿಸಿದೆ. ಡಿಯೋಘರ್ ಖಜಾನೆಯಿಂದ 27 ಸಾವಿರ ರೂ. ಪಡೆದಿದ್ದರು ಎಂಬ ಆರೋಪದಲ್ಲಿ ಶಿಕ್ಷೆಗೆ ಗುರಿಮಾಡಲಾಗಿದೆ. ಶಿಕ್ಷೆಗೆ ಗುರಿಯಾದ ನಂತರ ಪೊಲೀಸರು ಅಪರಾಧಿಗಳನ್ನು ರಾಂಚಿಯಲ್ಲಿರುವ ಬಿರ್ಸಾ ಮುಂಡಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಇಂದು ಇವರೆಲ್ಲರಿಗೂ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಲಾಲು ಪ್ರಸಾದ್ ಯಾದವ್ ಅವರಿಗೆ 3 ರಿಂದ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಅವರ ಚುನಾವಣಾ ಭವಿಷ್ಯ ಅಂತ್ಯವಾಗಲಿದೆ. ಇದು ಕೇವಲ ಲಾಲು ಅವರಿಗೆ ಮಾತ್ರವಲ್ಲದೆ ಆರ್ಜೆಡಿ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. 

 

ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 420 ಮತ್ತು ಸೆಕ್ಷನ್ 13 (2) ರ ಅಡಿಯಲ್ಲಿ ಲಾಲು ಯಾದವ್ ಅವರನ್ನು ಆರೋಪಿ ಎಂದು ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. 1994 ಮತ್ತು 1996 ರ ನಡುವೆ, ದಿಯೋಘರ್ ಜಿಲ್ಲೆಯ ಖಜಾನೆಯಿಂದ 84.5 ಲಕ್ಷ ರೂಪಾಯಿಗಳನ್ನು ವಂಚನೆಯ ರೀತಿಯಲ್ಲಿ ಹಿಂಪಡೆಯಲಾಯಿತು. ಮಾಹಿತಿ ಪ್ರಕಾರ, ಇಂದು ಎಲ್ಲಾ ಅಪರಾಧಿಗಳು ಬೆಳಿಗ್ಗೆ ಸುಮಾರು 11 ಗಂಟೆಗೆ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ.

 

ಏತನ್ಮಧ್ಯೆ, 70 ವರ್ಷ ವಯಸ್ಸಿನ ಲಾಲೂ ಪ್ರಸಾದ್ ಯಾದವ್ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು ಅವರಿಗೆ ಕನಿಷ್ಠ ಶಿಕ್ಷೆ ನೀಡಬೇಕೆಂದು ಲಾಲೂ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.