ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 50:50 ಸೂತ್ರ ಅನುಸರಿಸದಿದ್ದರೆ ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಳ್ಳಬೇಕಾಗುತ್ತದೆ ಎಂದು  ಶಿವಸೇನೆ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

"ಅಮಿತ್ ಶಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ನಿರ್ಧರಿಸಿದ 50:50 ಸೂತ್ರಗಳನ್ನು ಬಿಜೆಪಿ ಗೌರವಿಸಬೇಕಾಗಿದೆ. ನಾನು ಮೈತ್ರಿ ಮುರಿಯುವ ಬಗ್ಗೆ ಮಾತನಾಡುವುದಿಲ್ಲ ಆದರೆ ದಿವಾಕರ್ ರೌಟೆ ಹೇಳಿದ್ದು ತಪ್ಪಲ್ಲ" ಎಂದು ಸಂಜಯ್ ರೌತ್ ಎಎನ್‌ಐಗೆ ತಿಳಿಸಿದರು.


ಬುಧವಾರ, ಮಹಾರಾಷ್ಟ್ರ ಸರ್ಕಾರದ ಸಚಿವರಾಗಿರುವ ಶಿವಸೇನೆ ನಾಯಕ ರೌಟೆ, ಬಿಜೆಪಿಯಿಂದ ಸಮಾನ ಸಂಖ್ಯೆಯ ಸ್ಥಾನಗಳನ್ನು ನೀಡದಿದ್ದರೆ ಶಿವಸೇನೆ ಮತ್ತು ಬಿಜೆಪಿ ನಡುವಿನ ಚುನಾವಣಾ ಪೂರ್ವ ಮೈತ್ರಿ ಮುರಿಯಬಹುದು ಎಂದು ಹೇಳಿಕೊಂಡಿದ್ದರು. 2014 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದವು ಮತ್ತು ಇಬ್ಬರೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಸರ್ಕಾರ ರಚಿಸಲು ಎರಡೂ ಪಕ್ಷಗಳು ಕೈಜೋಡಿಸಿದವು.


ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019 ಕ್ಕೆ ಮುಂಚಿತವಾಗಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಜಗಳ ಹೆಚ್ಚಾಗಿದೆ ಎಂದು ಜೀ ಮೀಡಿಯಾ ಮಂಗಳವಾರ (ಸೆಪ್ಟೆಂಬರ್ 17), ವರದಿ ಮಾಡಿತ್ತು. 288 ಸದಸ್ಯರ ಬಲ ಹೊಂದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ ಚುನಾವಣಾ ಪೂರ್ವ ಮೈತ್ರಿಗಾಗಿ '50 -50 ಸೂತ್ರ' ಅನುಸರಿಸುವಂತೆ ಶಿವಸೇನೆ ಒತ್ತಾಯಿಸುತ್ತಿದೆ. ಆದರೆ ಬಿಜೆಪಿಗೆ ಶಿವಸೇನೆಗೆ 124 ಕ್ಕಿಂತ ಹೆಚ್ಚು ಸ್ಥಾನ ಬಿಡಲು ಇಷ್ಟವಿಲ್ಲ ಎಂದು ತಿಳಿದುಬಂದಿದೆ.


ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿ ಎಂದಷ್ಟೇ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಶಿವಸೇನೆ ನಾಗ್ಪುರ ಸೇರಿದಂತೆ ಎಲ್ಲಾ ಸ್ಥಾನಗಳಲ್ಲಿ ಆಸಕ್ತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಎಲ್ಲಾ ಸ್ಥಾನಗಳಲ್ಲಿ ಪಕ್ಷವು ತನ್ನ ಆಸಕ್ತ ಅಭ್ಯರ್ಥಿಗಳ ಸಂದರ್ಶನವನ್ನು ಪ್ರಾರಂಭಿಸಿದೆ.