ತೆಲಂಗಾಣ: ನಾಯಕರನ್ನು ಮೆಚ್ಚಿಸಲು, ಪಕ್ಷದ ಬೆಂಬಲಿಗರು ಮತ್ತು ಕೆಲಸಗಾರರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಾಗುತ್ತಾರೆ. ಮುಖಂಡರಿಗೆ ಸಿಹಿತಿಂಡಿ ನೀಡುವ, ಹಾರ ಹಾಕುವ ಮತ್ತು ಘೋಷಣೆಗಳನ್ನು ಕೂಗುವುದು ಈಗ ಸಾಮಾನ್ಯವಾಗಿದೆ. ಆದರೆ ತೆಲಂಗಾಣದ ಭೋಲ್ಪಾಲಿನಲ್ಲಿ ಇವೆಲ್ಲವನ್ನೂ ಮೀರಿದ ಘಟನೆಯೊಂದು ನಡೆದಿದೆ. ತೆಲಂಗಾಣ ವಿಧಾನಸಭಾ ಸ್ಪೀಕರ್ ಎಸ್. ಮಧುಸೂದನ್ ಚರಿ ಅವರ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಭಾನುವಾರ (ಏಪ್ರಿಲ್ 1) ಭೂಪಾಲ್ ಪಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲು ಸ್ಪೀಕರ್ ಎಸ್. ಮಧುಸೂದನ್ ಚರಿ ಬಂದಿದ್ದರು. ಅಲ್ಲಿ ಅವರನ್ನು ಸಂತೋಷಪಡಿಸಲು ಮಧುಸೂದನ್ ಬೆಂಬಲಿಗರು ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಸುದ್ದಿ ಸಂಸ್ಥೆಯ ANI ನಲ್ಲಿ ಬಿಡುಗಡೆಯಾದ ವಿಡಿಯೋದಲ್ಲಿ, ಮಧುಸೂದನ್ ಬಿಳಿ ಕುರ್ತಾ, ಪೈಜಾಮಾ ಮತ್ತು ಕೆಂಪು ಶಾಲು ಧರಿಸಿ ಕುಳಿತಿದ್ದಾರೆ ಮತ್ತು ಅವರ ಬೆಂಬಲಿಗರು ದೊಡ್ಡ ಪಾತ್ರೆಗಳಲ್ಲಿ ಹಾಲನ್ನು ತಂದು ಅವರಿಗೆ ಹಾಲಿನ ಅಭಿಕ್ಷೇಕ  ಮಾಡುತ್ತಿದ್ದಾರೆ. ಈ ಕೆಳಗಿನ ವಿಡಿಯೋದಲ್ಲಿ ನೀವು ಇದನ್ನು ಸ್ಪಷ್ಟವಾಗಿ ಕಾಣಬಹುದು.



ಯಾರೀ ಮಧುಸೂದನ್?
ಮಧುಸೂದನ್ ಅವರ ಬೆಂಬಲಿಗರು ಇದನ್ನು ಮಾಡುತ್ತಿರುವಾಗ ಮಧುಸೂದನ್ ಅದನ್ನು ದಯವಿಟ್ಟು ಮಧುಸೂದನ್ ತೆಲಂಗಾಣ ರಾಷ್ಟ್ರ ಸಮಿತಿ (TRS) ಯ ನಾಯಕರಾಗಿದ್ದು, ಭೂಪಾಲ್ ಪಲ್ಲಿ ಶಾಸಕ ಕೂಡಾ ಆಗಿದ್ದಾರೆಸಿ. 2014 ರಲ್ಲಿ ಎಂಎಲ್ಎ ಆಯ್ಕೆಯಾದ ಬಳಿಕ ಅವರು ತೆಲಂಗಾಣ ವಿಧಾನಸಭೆಯ ಮೊದಲ ಸ್ಪೀಕರ್ ಆಗಿದ್ದಾರೆ.