ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹತ್ಯೆಗೈದ ಶಕ್ತಿಗಳೇ  ದೇಶದಲ್ಲಿ ಭಯದ ವಾತಾವರಣವನ್ನು  ಸೃಷ್ಟಿಸುತ್ತಿವೆ ಎಂದು ಅಖಿಲ ಭಾರತ ಮಜ್ಲಿಸ್ ಇ ಇಥೇಹದ್-ಉಲ್ ಮುಸ್ಲಿಮೀನ್ (ಎಐಐಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದರು.


COMMERCIAL BREAK
SCROLL TO CONTINUE READING

ಹೈದರಾಬಾದ್ ನ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಅವರು " ಈಗ ದೇಶವು ಭಯದ ವಾತಾವರಣದಿಂದ ಕೂಡಿದೆ,ಇದರ ಹಿಂದೆ ಯಾರು ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದರೋ ಅಂತಹ ಶಕ್ತಿಗಳೇ ಇದರ ಹಿಂದಿವೆ,ಮತ್ತು ಅವರು ಯಾರು ಕೂಡ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಬದಲಾಗಿ ಬ್ರಿಟಿಷರಿಗೆ ಸಹಾಯ ಮಾಡಿದರು ಎಂದು ಅಭಿಪ್ರಾಯಪಟ್ಟರು.


ಒವೈಸಿ ಇನ್ನು ಮುಂದುವರೆದು  ಮೋದಿ ಸರ್ಕಾರವು ಕೇವಲ ಮುಸ್ಲಿಂರನ್ನು ವೋಟ್ ಬ್ಯಾಂಕ್ ಎಂದು ತಿಳಿದಿದೆ,ಅವರಿಗೆ ಮುಸ್ಲಿಮರು ಮುಖ್ಯಪರದೆಗೆ ಬರುವುದು ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು.ಇತ್ತೀಚೆಗಿನ ಗೊರಖಪುರ್ ಮತ್ತು ಫುಲ್ಪುರ್ ಲೋಕಸಭಾ ಉಪಚುನಾವಣೆಯ ಫಲಿತಾಂಶವು ಮೋದಿ ಅಲೆ ಇಲ್ಲ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಎಂದರು.