ನೆದರ್ ಲ್ಯಾಂಡ್ ಮೂಲದ ವ್ಯಕ್ತಿಯೊಬ್ಬ ರೈಲಿನಿಂದ ಜಿಗಿದು ಮೃತಪಟ್ಟ ಘಟನೆ ರಾಜಸ್ತಾನದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ರಾಜಸ್ತಾನದ ಸವಾಯ್ ಮಾಧೋಪುರ್ ಪ್ರದೇಶದಲ್ಲಿ ಆ ವಿದೇಶಿ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಬೇರೆ ರೈಲನ್ನು ಹತ್ತಿದ ಸಂದರ್ಭದಲ್ಲಿ ನಡೆದಿದೆ. 


ಮೃತನ ಸ್ನೇಹಿತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಆಗ್ರಾದಿಂದ ಸವಾಯ್ ಮಾಧೋಪುರ್ ಗೆ ಹೊರಡುವ ರೈಲನ್ನು ಹತ್ತಬೇಕಿದ್ದ ಅವರು ಬೇರೆ ರೈಲನ್ನು ಹತ್ತಿದ್ದರು. ತಪ್ಪಾದ ರೈಲನ್ನು ಹತ್ತಿರುವ ಬಗ್ಗೆ ಅರಿತ ಅವರು ಕೂಡಲೇ ರೈಲಿನಿಂದ ಜಿಗಿಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.