ನವದೆಹಲಿ:ದೇಶಾದ್ಯಂತ ಇದುವರೆಗೆ ಯಾರಾದರು ತಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ ಅಳವಡಿಸಲು ಮರೆತುಹೋಗಿದ್ದರೆ, ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಈ ಕುರಿತು ಇತ್ತೀಚೆಗಷ್ಟೇ ಸಂತಸದ ಸುದ್ದಿಯೊಂದನ್ನು ನೀಡಿತ್ತು ಮೋದಿ ಸರ್ಕಾರ. ದೇಶಾದ್ಯಂತ ಇರುವ ಒಟ್ಟು 65 ಟೋಲ್ ಪ್ಲಾಜಾಗಳ ಮೇಲೆ ಫಾಸ್ಟ್ ಟ್ಯಾಗ್ ನ ನಿಯಮಗಳ ಸಡಿಲಿಕೆಯನ್ನು ಸರ್ಕಾರ ಒಂದು ತಿಂಗಳ ಅವಧಿಗೆ ವಿಸ್ತರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ ಈ ಟೋಲ್ ಪ್ಲಾಜಾಗಳಲ್ಲಿನ ಲೈನ್ ಗಳನ್ನು ಫೆಬ್ರುವರಿ 15ರವರೆಗೆ ಹೈಬ್ರಿಡ್ ಲೈನ್ ಗಳ ರೂಪದಲ್ಲಿ ಬಳಸಲಾಗುವುದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

65 ಟೋಲ್ ಪ್ಲಾಜಾಗಳಿಗೆ ಈ ಸಡಿಲಿಕೆ
ಸರ್ಕಾರ ಈ 65 ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ನ ನಿಯಮಗಳಲ್ಲಿ ಸ್ವಲ್ಪ ಕಾಲ ಸಡಿಲಿಕೆ ನೀಡಿದೆ. ಈ ಪ್ಲಾಜಾಗಳಲ್ಲಿ ಬಹುತೇಕ ಲೇನ್ ಗಳು ಕ್ಯಾಶ್ ಪೇಮೆಂಟ್ ಆಧಾರಿತವಾಗಿವೆ, ಈ ಟೋಲ್ ಪ್ಲಾಜಾಗಳು ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ್, ಪಂಜಾಬ್, ಚಂಡೀಗಢ ಹಾಗೂ ಆಂಧ್ರ ಪ್ರದೇಶಗಳಲ್ಲಿವೆ ಎಂದು ಹೇಳಿದೆ. 


ಜನಸಾಮಾನ್ಯರು ಪರದಾಡುವಂತಾಗಿದೆ
ಇಂದಿನಿಂದ ದೇಶಾದ್ಯಂತದ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಓಡಾಡುವ ವಾಹನಗಳಿಗೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಾಯಗೊಳಿಸಿದೆ. ಈ ಫಾಸ್ಟ್ ಟ್ಯಾಗ್ ಗಳನ್ನು ಆಕ್ಟಿವೇಟ್ ಮಾಡಲು ಅಥವಾ ರಿಚಾರ್ಜ್ ಮಾಡಲು ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳ ಟೋಲ್ ಟ್ಯಾಕ್ಸ್ ಕಡಿತಕ್ಕೆ ಸಾಕಷ್ಟು ಸಮಯ ಬೇಕಾಗುತ್ತಿದೆ. ಈ ಕಾರಣಗಳಿಂದ ಜನಸಾಮಾನ್ಯರು ತೊಂದರೆ ಎದುರಿಸುವ ಸ್ಥಿತಿ ಎದುರಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಅವಧಿಯನ್ನು ವಿಸ್ತರಿಸಿದೆ ಎನ್ನಲಾಗಿದೆ.


NHAI ನೀಡಿದೆ ಒಂದು ತಿಂಗಳ ಸಡಿಲಿಕೆ
ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಈ ಕುರಿತು ತನಿಖೆ ನಡೆಸಿದ್ದು, ದೇಶಾದ್ಯಂತ ಇರುವ ಸುಮಾರು 65 ಟೋಲ್ ಪ್ಲಾಜಾಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ ಎಂದಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸರ್ಕಾರ NHAI(ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ)ಗೆ ಈ ಟೋಲ್ ಪ್ಲಾಜಾಗಳ ಮೇಲೆ ಒಂದು ತಿಂಗಳ ಅವಧಿಯವರೆಗೆ ನಿಯಮಗಳನ್ನು ಸಡಿಲುಗೊಳಿಸಲು ಅನುಮತಿ ನೀಡಿದೆ.


ಡಿಸೆಂಬರ್ 15ಕ್ಕೆ ಸರ್ಕಾರ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿತ್ತು
NHAI ಅಡಿ ಬರುವ ಎಲ್ಲ ಟೋಲ್ ಪ್ಲಾಜಾಗಳ ಮೇಲೆ ಡಿಸೆಂಬರ್ 15ರಿಂದ ಸರ್ಕಾರ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆ ಟೋಲ್ ಪ್ಲಾಜಾಗಳ ಶೇ.75ರಷ್ಟು ಲೇನ್ ಗಳಲ್ಲಿ ಕ್ಯಾಶ್ ಪೇಮೆಂಟ್ ಮೇಲೆ ತಡೆ ವಿಧಿಸಲಾಗಿದೆ. ಡಿಸೆಂಬರ್ 2019ರ ಅಂತ್ಯದ ವೇಳೆಗೆ ಸುಮಾರು ಒಂದು ಕೋಟಿ ಫಾಸ್ಟ್ ಟ್ಯಾಗ್ ಗಳನ್ನು ದೇಶಾದ್ಯಂತ ಬಿಡುಗಡೆ ಮಾಡಲಾಗಿತ್ತು. ಇಂದಿಗೂ ಕೂಡ ಪ್ರತಿನಿತ್ಯ ಎರಡು ಲಕ್ಷ ಫಾಸ್ಟ್ ಟ್ಯಾಗ್ ಗಳ ಮಾರಾಟ  ನಡೆಯುತ್ತಿದೆ. ಫಾಸ್ಟ್ ಟ್ಯಾಗ್ ಗಳ ಲಭ್ಯತೆಯಲ್ಲಿ ಉಂಟಾಗುತ್ತಿದ್ದ ವಿಳಂಬದ ಕಾರಣ ಸರ್ಕಾರ ಕೆಲ ಸಮಯದವರೆಗೆ ತನ್ನ ನಿಯಮಗಳನ್ನು ಸಡಿಲಿಸಿತ್ತು.