Sharad Tripathi : ಬಿಜೆಪಿ ಮಾಜಿ ಸಂಸದ ನಿಧನ : ಪಿಎಂ ಮೋದಿ ಸಂತಾಪ
ಉತ್ತರ ಪ್ರದೇಶದ ಸಂತ ಕಬೀರ್ ನಗರ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಸಂಸದ
ನವದೆಹಲಿ : ಸಂತ ಕಬೀರ್ ನಗರದ ಮಾಜಿ ಬಿಜೆಪಿ ಸಂಸದ ಶರದ್ ತ್ರಿಪಾಠಿ ಗುರುಗ್ರಾಮ್ ಆಸ್ಪತ್ರೆಯಲ್ಲಿ ಇಂದು ರಾತ್ರಿ ನಿಧನ ಹೊಂದಿದ್ದಾರೆ. ಉತ್ತರ ಪ್ರದೇಶದ ಸಂತ ಕಬೀರ್ ನಗರ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಸಂಸದರು ತಮ್ಮ 49 ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬಿಜೆಪಿ ಮಾಜಿ ಸಂಸದ ಶರದ್ ತ್ರಿಪಾಠಿ(Sharad Tripathi) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮಾಜಿ ಸಂಸದರ ಅಕಾಲಿಕ ಮರಣವನ್ನು ಖಂಡಿಸಿದ ಪಿಎಂ ಮೋದಿ ಅವರು ದೀನ ದಲಿತರಿಗೆ ಸೇವೆ ಸಲ್ಲಿಸಲು ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರ DA ಶೇ.17 ರಿಂದ 32 ಕ್ಕೆ ಏರಿಕೆ : ಸೆಪ್ಟೆಂಬರ್ ವೇತನದಲ್ಲಿ ಸಿಗಲಿದೆ DA
ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಪಿಎಂ ಮೋದಿ(PM Modi), "ಶ್ರೀ ಶರದ್ ತ್ರಿಪಾಠಿ ಅವರ ಅಕಾಲಿಕ ನಿಧನವು ನನ್ನನ್ನು ಮತ್ತು ಇತರರನ್ನು ದುಃಖಿತಗೊಳಿಸಿದೆ. ಅವರು ಸಮಾಜಕ್ಕೆ ಸೇವೆ ಸಲ್ಲಿಸುವುದು ಮತ್ತು ದೀನ ದಲಿತರಿಗೆ ಕೆಲಸ ಮಾಡುವುದನ್ನು ಇಷ್ಟಪಟ್ಟರು. ಸಂತ ಕಬೀರ್ ದಾಸ್ ಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಅವರು ವಿಶಿಷ್ಟ ಪ್ರಯತ್ನಗಳನ್ನು ಮಾಡಿದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸಿದ್ದಾರೆ. ಓಂ ಶಾಂತಿ, "ಎಂದು ಬರೆದುಕೊಂಡಿದ್ದಾರೆ.
RTO update : ಇಂದಿನಿಂದ RTO ಕಚೇರಿಯಲ್ಲಿ ಪರೀಕ್ಷೆಯಿಲ್ಲದೆ DL ಪಡೆಯಬಹುದು!
ತ್ರಿಪಾಠಿ 2014 ರ ಲೋಕಸಭಾ ಚುನಾವಣೆಯಲ್ಲಿ ಸಂತ ಕಬೀರ್ ನಗರ ಸಂಸದೀಯ ಕ್ಷೇತ್ರದಿಂದ ಜಯಗಳಿಸಿದರು. ಅವರ ತಂದೆ ರಾಮಪತಿ ರಾಮ್ ತ್ರಿಪಾಠಿ ಡಿಯೋರಿಯಾದ ಬಿಜೆಪಿ ಸಂಸದ(BJP MP)ರಾಗಿದ್ದಾರೆ.
ಇದನ್ನೂ ಓದಿ : Corona Vaccine: 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಸಿದ್ಧವಾಯ್ತು ಕರೋನಾ ಲಸಿಕೆ ! ಡಿಜಿಸಿಐ ಅನುಮೋದನೆ ಕೋರಿದೆ ಈ ಕಂಪನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.