ನವದೆಹಲಿ: ಮಾಜಿ ರಕ್ಷಣಾ ಸಚಿವ ಮತ್ತು ಮಹಾನ್ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರು ಮಂಗಳವಾರ ಮೃತಪಟ್ಟಿದ್ದಾರೆ. ಅಲ್ಝಮೈರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ 88 ವರ್ಷದ ಜಾರ್ಜ್ ಫರ್ನಾಂಡಿಸ್ ಇಂದು ಬೆಳಿಗ್ಗೆ ನವದೆಹಲಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಜೂನ್ 3, 1930 ರಂದು ಮಂಗಳೂರಿನಲ್ಲಿ ಜನಿಸಿದರು. 


ಮಂಗಳೂರಿನಲ್ಲಿ ಬೆಳೆದ ಫರ್ನಾಂಡಿಸ್ 16 ವರ್ಷದವರಾಗಿದ್ದಾಗ ಮನೆಯವರು ಅವರನ್ನು ಕ್ರಿಶ್ಚಿಯನ್ ಮಿಷನರಿಯಲ್ಲಿ ಪಾದ್ರಿಯಾಗಲು ತರಬೇತಿ ಪಡೆಯಲು ಬೆಂಗಳೂರಿಗೆ ಕಳುಹಿಸಿದರೆ, ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವೆತ್ಯಯದಿಂದ ಜಿಗುಪ್ಸೆಗೊಂಡ ಅವರು ಹೊರಬಂದರು. ತಮ್ಮ 18 ನೇ ವಯಸ್ಸಿನಲ್ಲಿ ಚರ್ಚ್ ತೊರೆದು, ಉದ್ಯೋಗ ಹುಡುಕಿಕೊಂಡು ಬಾಂಬೆಗೆ ತೆರಳಿದರು.


ಆ ವೇಳೆ ಚೋಪಡಿ ಬೆಂಚುಗಳ ಮೇಲೆ ಮಲಗುತಿದ್ದ ಫರ್ನಾಂಡಿಸ್ ಸೋಷಿಯಲಿಸ್ಟ್ ಪಾರ್ಟಿ ಮತ್ತು ಟ್ರೇಡ್ ಯೂನಿಯನ್ ಚಳುವಳಿಯ ಕಾರ್ಯಕ್ರಮಗಳಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಜಾರ್ಜ್ ಸ್ವತಃ ವಿವರಿಸಿದ್ದಾರೆ. ಆ ಸಮಯದಲ್ಲಿ, ರಾಮ್ ಮನೋಹರ್ ಲೋಹಿಯಾ ಫರ್ನಾಂಡಿಸ್ ಅವರಿಗೆ ಸ್ಫೂರ್ತಿಯಾಗಿದ್ದರಂತೆ.


10 ಭಾಷೆಗಳನ್ನು ಬಲ್ಲವರಾಗಿದ್ದ ಜಾರ್ಜ್ ಫರ್ನಾಂಡಿಸ್:
ಜಾರ್ಜ್ ಫೆರ್ನಾಂಡಿಸ್ ಹಿಂದಿ, ಇಂಗ್ಲಿಷ್, ತಮಿಳು, ಮರಾಠಿ, ಕನ್ನಡ, ಉರ್ದು, ಮಲೆಯಾಳಂ, ತುಳು, ಕೊಂಕಣಿ ಮತ್ತು ಲ್ಯಾಟಿನ್ ಭಾಷೆಗಳನ್ನು ಬಲ್ಲವರಾಗಿದ್ದರು. 


ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಆಗಸ್ಟ್ 2009 ರಿಂದ ಜುಲೈ 2010 ರವರೆಗೆ ರಾಜ್ಯ ಸಭಾ ಸದಸ್ಯರಾಗಿ ಕೊನೆಯದಾಗಿ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದರು.