ಅಹ್ಮದಾಬಾದ್: ಗುಜರಾತ್ ನ ಮಾಜಿ ಶಾಸಕ ಜಯಂತಿ ಭಾನುಶಾಲಿಯವರನ್ನು ಕಿಡಿಗೇಡಿಗಳು ಚಲಿಸುತ್ತಿರುವ ರೈಲಿನಲ್ಲಿ ಗುಂಡುಹಾರಿಸಿ ಹತ್ಯೆಗೈದಿದ್ದಾರೆ. ಹತ್ಯೆಗೀಡಾದ ಸಮಯದಲ್ಲಿ ಜಯಂತಿ ಭಾನುಶಾಲಿ ಅವರು ಸಯಾಜಿ ನಾಗರಿ ರೈಲಿನಿಂದ ಅಹಮದಾಬಾದ್ ಭುಜ್ಗೆ ತೆರಳುತ್ತಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆಯ ಎಎನ್ಐ ವರದಿಯ ಪ್ರಕಾರ, ಮಾಲಿಯಾ ಸ್ಟೇಷನ್ ಸಮೀಪ ಎಸಿ ಕೋಚ್ ನಲ್ಲಿ ನುಸುಳಿದ ಸಂಚುಕೋರರು ಭಾನುಶಾಲಿ ಮೇಲೆ ಗುಂಡು ಹಾರಿಸಿದರು. ತಕ್ಷಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿದರು ಮತ್ತು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಮಾಜಿ ಶಾಸಕನ ಮೇಲೆ ಯಾರು ಗುಂಡು ಹಾರಿಸಿದ್ದಾರೆ? ಈ ವಿಷಯದಲ್ಲಿ ಮಾತನಾಡಲು ಯಾವುದೇ ಅಧಿಕಾರಿ ಸಿದ್ಧವಾಗಿಲ್ಲ.


ಯಾರೀ ಜಯಂತಿ ಭಾನುಶಾಲಿ?
ಜಯಂತಿ ಭಾನುಶಾಲಿ  ಅವರು ಗುಜರಾತ್ ಬಿಜೆಪಿಯ ಮಾಜಿ ಉಪಾಧ್ಯಕ್ಷರು ಮತ್ತು ಅಬ್ದಾದಾಸ್ ಎಂಎಲ್ಎ. 2018 ರಲ್ಲಿ ಸೂರತ್ನ ಕಾಲೇಜಿನಲ್ಲಿ ಹುಡುಗಿಯೊಡನೆ ತಪ್ಪಾಗಿ ವರ್ತಿಸಿದ ಬಳಿಕ ಅವರು ಬಿಜೆಪಿ ಉಪಾಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡಿದರು.