ನವದೆಹಲಿ: ಮಂಗಳವಾರ  ಗುಜರಾತಿನ ಮಾಜಿ ಮುಖ್ಯಮಂತ್ರಿ ಶಂಕರ್ಸಿನ್ ವಘೇಲಾ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸೇರ್ಪಡೆಯಾಗಿದ್ದಾರೆ. ಆ ಮೂಲಕ ಈಗ ಗುಜರಾತಿನಲ್ಲಿ ಎನ್ಸಿಪಿಗೆ ಬಲ ಬಂದಂತಾಗಿದೆ.


COMMERCIAL BREAK
SCROLL TO CONTINUE READING

2017 ರ ಗುಜರಾತ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದಿದ್ದ ವಘೇಲಾ ನಂತರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.ಈಗ 2019 ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಕಿತ್ತು ಹಾಕುವ ಸಲುವಾಗಿ ದೆಹಲಿ ಮತ್ತು ಇತರ ರಾಜ್ಯಗಳಲ್ಲೂ ವಘೇಲಾ ಪ್ರಚಾರ ನಡೆಸುತ್ತಿದ್ದಾರೆ.


ಎನ್ಸಿಪಿ ಗುಜರಾತಿನ 182 ವಿಧಾನಸಭಾ ಸದಸ್ಯರಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆಗ ಕಾಂಗ್ರೆಸ್ ಮತ್ತು ಎನ್ಸಿಪಿ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದ್ದವು.ಈಗ ಮುಂಬರುವ ಲೋಕಸಭೆ ಚುನಾವಣೆಗೆ ಎರಡೂ ಪಕ್ಷಗಳು ಮತ್ತೊಮ್ಮೆ ಸೀಟ್ ಹಂಚಿಕೆ ಒಪ್ಪಂದವನ್ನು ತಲುಪಲು ವಿಫಲವಾದಲ್ಲಿ, ವಘೇಲಾ ಮತ್ತು ಅವರ ಬೆಂಬಲಿಗರು ಎನ್ಸಿಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಬಹುದು ಎನ್ನಲಾಗಿದೆ.ಗುಜರಾತಿನಲ್ಲಿ 26 ಲೋಕಸಭಾ ಸ್ಥಾನಗಳಿದ್ದು, ಈ ಹಿಂದಿನ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಎಲ್ಲವನ್ನೂ ಗೆದ್ದಿದೆ.


ಈ ಹಿಂದೆ ವಘೇಲಾ ಗುಜರಾತ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಮತ್ತು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.