Boota Singh Passed Away: ನವದೆಹಲಿ: ದೇಶದ ಮಾಜಿ ಗೃಹ ಸಚಿವ ಬುಟಾ ಸಿಂಗ್ ದೆಹಲಿಯಲ್ಲಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಬುಟಾ ಸಿಂಗ್ ಸಾವಿನ ಬಗ್ಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.  ಕಾಂಗ್ರೆಸ್ ಮುಖಂಡ ಬುಟಾ ಸಿಂಗ್ 8 ಬಾರಿ ಲೋಕಸಭಾ ಸದಸ್ಯರಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನು ಓದಿ-ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ


ಪಂಜಾಬ್‌ನ ಪ್ರಮುಖ ದಲಿತ ಮುಖಂಡರಾಗಿ ಅವರು ಗುರುತಿಸಿಕೊಂಡಿದ್ದರು. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಮಗಳನ್ನು ಅಗಲಿದ್ದಾರೆ.


1986 ರಿಂದ 1989 ರವರೆಗೆ ರಾಜೀವ್ ಗಾಂಧಿ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದರು. ಇದಕ್ಕೂ ಮೊದಲು ಅವರು 1984 ರಿಂದ 1986 ರವರೆಗೆ ರಾಜೀವ್ ಗಾಂಧಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ, ಬುಟಾ ಸಿಂಗ್ 2004 ರಿಂದ 2006 ರವರೆಗೆ ಬಿಹಾರ ರಾಜ್ಯಪಾಲರಾಗಿದ್ದರು. 2007 ರಿಂದ 2010 ರವರೆಗೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಅವರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.


ಬೂಟಾ ಸಿಂಗ್ ನಿಧನಕ್ಕೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), "ಬೂಟಾ ಸಿಂಗ್  ಓರ್ವ ಅನುಭವಿ ಆಡಳಿತಗಾರರಾಗಿದ್ದರು ಹಾಗೂ ಬಡವ ಹಾಗೂ ಹಿಂದುಳಿದವರ ಪ್ರಭಾವಶಾಲಿ ಧ್ವನಿಯಾಗಿದ್ದರು. ಅವರ ನಿಧನ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರಿಗೆ ನನ್ನ ಸಹಾನುಭೂತಿ" ಎಂದು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.