Pavan Varma Quits TMC : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಪಕ್ಷ ಟಿಎಂಸಿಗೆ ಭಾರಿ ಹಿನ್ನಡೆಯಾಗಿದೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪವನ್ ವರ್ಮಾ ಅವರು ಟಿಎಂಸಿಗೆ ಗುಡ್ ಬೈ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಪವನ್ ವರ್ಮಾ ಅವರು ಕಳೆದ ವರ್ಷವಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಪವನ್ ವರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ, ಟ್ವಿಟ್ ನಲ್ಲಿ, ಮಮತಾ ಬ್ಯಾನರ್ಜಿ ಅವರೆ ನಾನು ಟಿಎಂಸಿಗೆ ರಾಜೀನಾಮೆಯನ್ನು ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಅಂಗೀಕರಿಸಿ. ನಿಮ್ಮ ಬೆಂಬಲ ಮತ್ತು ವಿಶ್ವಾಸಕ್ಕಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ನಾನು ನಿಮ್ಮೊಂದಿಗೆ ಸಂಪರ್ಕದಲ್ಲಿಯೂ ಇರುತ್ತೇನೆ. ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.


Independence Day 2022 : ಕೆಂಪು ಕೋಟೆ ಮೇಲೆ ತಯಾರಾಗುತ್ತಿದೆ 'ಬುಲೆಟ್ ಪ್ರೂಫ್' ವೇದಿಕೆ!


 ನವೆಂಬರ್ 5, 1953 ರಂದು ಜನಿಸಿದ ಪವನ್ ವರ್ಮಾ ಅವರು ಬರಹಗಾರ, ರಾಜಕಾರಣಿ ಮಾತ್ರವಲ್ಲದೆ ಐಎಫ್ ಎಸ್ ಅಧಿಕಾರಿಯೂ ಆಗಿದ್ದರು. ಅವರು ಭೂತಾನ್ ಮತ್ತು ಸೈಪ್ರಸ್‌ಗೆ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.