ನವದೆಹಲಿ: ರಾಜ್ಯಸಭೆಗೆ ರಾಜೀನಾಮೆ ನೀಡಿ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಮಾಜಿ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಅವರನ್ನು ಸರ್ಕಾರ ಸಂಸತ್ತಿನ ಮೇಲ್ಮನೆಗೆ ಮರುನಾಮ ನಿರ್ದೇಶನ ಮಾಡಿದೆ.


COMMERCIAL BREAK
SCROLL TO CONTINUE READING

"ಭಾರತದ ಸಂವಿಧಾನದ 80 ನೇ ಪರಿಚ್ಚೇದ (1) ರ ಉಪಬಂದ (ಎ) ನಿಂದ ನೀಡಲ್ಪಟ್ಟ ಅಧಿಕಾರಗಳನ್ನು, ಆ ಲೇಖನದ ಬಂದ (3) ದೊಂದಿಗೆ 24-04-2022ರ ರಾಜೀನಾಮೆಯಿಂದಾಗಿ ಖಾಲಿ ಬಿದ್ದಿರುವ ಸ್ಥಾನವನ್ನು ಭರ್ತಿ ಮಾಡಲು ಸ್ವಪನ್ ದಾಸ್‌ಗುಪ್ತಾ (Swapan Dasgupta) ಅವರನ್ನು ಪರಿಷತ್ತಿಗೆ ಮರುನಾಮಕರಣ ಮಾಡಲು ರಾಷ್ಟ್ರಪತಿಗಳು ಇಚ್ಚಿಸಿದ್ದಾರೆ" ಎಂದು ಗೃಹ ಸಚಿವಾಲಯದ ಅಧಿಸೂಚನೆ ತಿಳಿಸಿದೆ.


ಇದನ್ನೂ ಓದಿ: ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಯನ್ನು ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ


ರಘುನಾಥ್ ಮೊಹಾಪಾತ್ರ ಅವರ ನಿಧನದಿಂದಾಗಿ ಖಾಲಿ ಬಿದ್ದಿರುವ ಸ್ಥಾನವನ್ನು ಭರ್ತಿ ಮಾಡಲು ಖ್ಯಾತ ವಕೀಲ ಮಹೇಶ್ ಜೆಠ್ಮಲಾನಿ ಅವರನ್ನು ಕೇಂದ್ರ ಸರ್ಕಾರವು ರಾಜ್ಯಸಭೆ (Rajya Sabha)ಗೆ ನಾಮನಿರ್ದೇಶನ ಮಾಡಿದೆ ಎಂದು ಗೃಹ ಸಚಿವಾಲಯ ಪ್ರತ್ಯೇಕ ಅಧಿಸೂಚನೆಯಲ್ಲಿ ತಿಳಿಸಿದೆ.ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಪ್ರಖ್ಯಾತ ವ್ಯಕ್ತಿಗಳನ್ನು ಮೇಲ್ಮನೆಗೆ ನಾಮ ನಿರ್ದೇಶನ ಮಾಡುತ್ತಾರೆ.


ಇದನ್ನೂ ಓದಿ- 'Corona ಎಲ್ಲಿಂದ ಬಂತು ಪತ್ತೆಹಚ್ಚಿ, ಇಲ್ಲದಿದ್ರೆ ಕೊವಿಡ್-26, ಕೊವಿಡ್-32 ಎದುರಿಸಲು ಸಿದ್ಧರಾಗಿ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ