ಮುಂಬೈ (ಮಹಾರಾಷ್ಟ್ರ) : ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಶಿ ವಿಧಿವಶರಾಗಿದ್ದಾರೆ. ಫೆಬ್ರವರಿ 21 ರಂದು, 86 ವರ್ಷದ ಮನೋಹರ್ ಜೋಶಿ ಹೃದಯಾಘಾತಕ್ಕೆ ಒಳಗಾದರು. ಅವರನ್ನು ಕೂಡಲೇ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಇರಿಸಲಾಗಿದ್ದ ಮನೋಹರ್‌ ಜೋಶಿ ಅವರ ಮೇಲೆ ವೈದ್ಯರ ತಂಡ ನಿರಂತರವಾಗಿ ನಿಗಾ ಇರಿಸಿದ್ದರು. ಆದರೆ ಶುಕ್ರವಾರ ಬೆಳಗಿನ ಜಾವದಲ್ಲಿ ಅವರು ಕೊನೆಯುಸಿರೆಳೆದರು.


COMMERCIAL BREAK
SCROLL TO CONTINUE READING

ಮನೋಹರ್ ಜೋಶಿ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಅವರ ಅಂತಿಮ ಸಂಸ್ಕಾರವನ್ನು ದಾದರ್ ಚಿತಾಗಾರದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು.


ಇದನ್ನೂ ಓದಿ: Tirupati : ಪ್ರತಿ ಹುಣ್ಣಿಮೆಯಂದು ಗರುಡಸೇವೆ : ಈ ದಿನ ಭೇಟಿ ನೀಡಿದರೆ ತಿಮ್ಮಪ್ಪನ ಆಶೀರ್ವಾದ ಖಂಡಿತ


5 ದಶಕಗಳ ರಾಜಕೀಯ ಪಯಣ 


ಸುಮಾರು 5 ದಶಕಗಳ ಕಾಲ ಮಹಾರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಮನೋಹರ್‌ ಜೋಶಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ಅವರ ರಾಜಕೀಯ ಜೀವನವು ಮುಂಬೈ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿ ಪ್ರಾರಂಭವಾಯಿತು. ನಂತರ ಅವರು ಮೇಯರ್, ವಿಧಾನ ಪರಿಷತ್ ಸದಸ್ಯ, ಶಾಸಕ, ಲೋಕಸಭೆ ಮತ್ತು ರಾಜ್ಯಸಭಾ ಸಂಸದ ಮತ್ತು ಕೇಂದ್ರ ಸಚಿವರಾದರರು. ನಂತರ NDA ಸರ್ಕಾರದ ಅವಧಿಯಲ್ಲಿ ಲೋಕಸಭೆಯ ಸ್ಪೀಕರ್ ಸಹ ಆಗಿದ್ದರು. 


ಶಿವಸೇನೆಯ ಮೊದಲ ಮುಖ್ಯಮಂತ್ರಿ


1955 ರಲ್ಲಿ ಶಿವಸೇನೆ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿಯೊಂದಿಗೆ ಸೇರಿ ಸರ್ಕಾರವನ್ನು ರಚಿಸಿತು. ಆಗ ಬಾಳ್ ಠಾಕ್ರೆ ಅವರು ತಮ್ಮ ಅತ್ಯಂತ ನಂಬಿಕಸ್ಥ ಮನೋಹರ್ ಜೋಶಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಈ ಮೂಲಕ ಶಿವಸೇನೆಯ ಮೊದಲ ಮುಖ್ಯಮಂತ್ರಿ ಆದರು. ಮನೋಹರ್ ಜೋಶಿ ಅವರು ಮಾರ್ಚ್ 14, 1995 ರಂದು ಮುಖ್ಯಮಂತ್ರಿಯಾದರು. ಜನವರಿ 31, 1999 ರವರೆಗೆ ಈ ಅಧಿಕಾರದಲ್ಲಿದ್ದರು. 


ಇದನ್ನೂ ಓದಿ: ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ತಿದ್ದುಪಡಿ ತರುವ ಅಗತ್ಯವಿಲ್ಲ : ಸಚಿವ ಭೂಪೇಂದ್ರ ಯಾದವ್ ಹೇಳಿಕೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.