ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ತೀವ್ರ ಸುಧಾರಣೆ ಕಂಡು ಬಂದಿದೆ ಎಂದು ಏಮ್ಸ್ ತಿಳಿಸಿದೆ.


COMMERCIAL BREAK
SCROLL TO CONTINUE READING

ವಾಜಪೇಯಿ ಆರೋಗ್ಯದ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಐಐಎಂಎಸ್ ನಿರ್ದೇಶಕ ಡಾ. ರಾಂಡಿಪ್ ಗುಲೇರಿಯಾ, "ಕಳೆದ 48 ಗಂಟೆಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ  ಗಮನಾರ್ಹ ಸುಧಾರಣೆಯಾಗಿದೆ.ಅವರ ಮೂತ್ರಪಿಂಡವು ಈಗ ಎಂದಿನಂತೆ ಸರಾಗವಾಗಿ ಕಾರ್ಯನಿರ್ವಹಿಸುತ್ತಿದೆ  , ಹೃದಯಾಘಾತ, ಉಸಿರಾಟದ ದರ ಮತ್ತು ರಕ್ತದೊತ್ತಡ ಕೂಡ ಸಹಜ ಸ್ಥಿತಿಯಲ್ಲಿದೆ, ಮುಂದಿನ ಕೆಲವು ದಿನಗಳಲ್ಲಿ  ಒಟ್ಟಾರೆ ಅವರ ಆರೋಗ್ಯವು ಸಹಜ ಸ್ಥಿತಿಗೆ ಬರಲಿದೆ "ಎಂದು ಅವರು ಹೇಳಿದರು.


ಮಾಜಿ ಪ್ರಧಾನಿ ವಾಜಪೇಯಿ ಅವರು ಜೂನ್ 11 ರಂದು ಮೂತ್ರದ ಸೋಂಕಿನಿಂದಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.