ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ನಿಧನಕ್ಕೆ ಸಂತಾಪ ಸೂಚಿಸಿದ PM Modi ಹೇಳಿದ್ದೇನು?
ರಾಷ್ಟ್ರಪತಿಗಳಾಗಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರಿಗೆ ಇನ್ನಷ್ಟು ಹತ್ತಿರವಾಗಿಸಿದ್ದರು ಎಂದು ಪಿಎಂ ಮೋದಿ ಹೇಳಿದ್ದಾರೆ. ದೇಶಾದ್ಯಂತ ಇರುವ ಅವರ ಪ್ರಶಂಸಕರು ಹಾಗೂ ಅಭಿಮಾನಿಗಳಿಗೆ ಪ್ರಧಾನಿ ತಮ್ಮ ಸಂತಾಪ ಸೂಚಿಸಿದ್ದಾರೆ.
ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜೀ ತಮ್ಮ 84 ನೇ ಇಳಿವಯಸ್ಸಿನಲ್ಲಿ ಕೊನೆಯುರಿರೆಲೆದಿದ್ದಾರೆ. ದೀರ್ಘಕಾಲದಿಂದ ಅವರ ಮೇಲೆ ಚಿಕಿತ್ಸೆ ನಡೆಸಲಾಗುತ್ತಿತ್ತು. ಅವರ ನಿಧನದಿಂದ ಇಡೀ ದೇಶಕ್ಕೆ ಆಘಾತ ಉಂಟಾಗಿದೆ. ದೇಶಾದ್ಯಂತ ಜನರು ಅವರಿಗೆ ತಮ್ಮ ಶೃದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಪ್ರಣಬ್ ದಾ ಅವರ ನಿಧಾನಕ್ಕೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದ ಮೇಲೆ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ನಿಧಾನಕ್ಕೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಭಾರತ ರತ್ನ ಪ್ರಣಬ್ ಮುಖರ್ಜಿ ನಿಧನಕ್ಕೆ ಇಡೀ ದೇಶ ಶೋಕ ವ್ಯಕ್ತಪಡಿಸುತ್ತದೆ. ದೇಶದ ಅಭಿವೃದ್ಧಿ ಪಥದ ಮೇಲೆ ಅವರು ಅಳಿಸಲಾಗದ ಮುದ್ರೆ ಒತ್ತಿದ್ದಾರೆ. ಓರ್ವ ವಿದ್ವಾನ, ಓರ್ವ ರಾಜಕೀಯ ಮುಖಂಡನಾಗಿ ಅವರಿಗೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಮಾಜದ ಪ್ರತಿಯೊಂದು ವರ್ಗದ ಜನರಿಂದ ಸನ್ಮಾನ ಲಭಿಸಿದೆ" ಎಂದಿದ್ದಾರೆ.
"ಭಾರತದ ರಾಷ್ಟ್ರಪತಿಯಾಗಿ ಶ್ರೀ ಪ್ರಣಬ್ ಮುಖರ್ಜೀ ಓರ್ವ ರಾಷ್ಟ್ರಪತಿಗಳಾಗಿ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರಿಗೆ ಇನ್ನಷ್ಟು ಹತ್ತಿರವಾಗಿಸಿದ್ದರು. ರಾಷ್ಟ್ರಪತಿಗಳ ಅಧಿಕೃತ ನಿವಾಸವನ್ನು ಅವರು ಕಲಿಕಾ, ನವಾಚಾರ, ಸಂಸ್ಕೃತಿ, ವಿಜ್ಞಾನ ಹಾಗೂ ಸಾಹಿತ್ಯದ ಕೆಂದ್ರವನ್ನಾಗಿಸಿದ್ದರು. ಪ್ರಮುಖ ನೀತಿಗಳನ್ನು ಒಳಗೊಂಡ ವಿಷಯದಲ್ಲಿ ಅವರ ಬೌದ್ಧಿಕ ಸಲಹೆ ನನ್ನಿಂದ ಮರೆಯಲು ಸಾಧ್ಯವಿಲ್ಲ" ಎಂದು ಪ್ರಧಾನಿ ತಮ್ಮ ಎರಡನೇ ಟ್ವೀಟ್ ನಲ್ಲಿ ಹೇಳಿದ್ದಾರೆ.
"ವರ್ಷ 2014ರಲ್ಲಿ ದೆಹಲಿ ಪಾಲಿಗೆ ನಾನು ಹೊಸಬನಾಗಿದ್ದೆ. ದೆಹಲಿ ಪ್ರವೇಶದ ಮೊದಲ ದಿನದಿಂದಲೂ ನನಗೆ ಶ್ರೀ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಹಾಗೂ ಆಶೀರ್ವಾದ ಲಭಿಸಿತು. ಅವರೊಂದಿಗಿನ ಮಾತುಕತೆಯ ಪ್ರತಿಯೊಂದು ಕ್ಷಣವನ್ನು ನಾನು ನೆನಪಿನ ಬುಟ್ಟಿಯಲ್ಲಿ ಸಂಗ್ರಹಿಸಿ ಇಡುವೆ. ಇಡೀ ದೇಶಾದ್ಯಂತ ಇರುವ ಅವರ ಕುಟುಂಬ ಸದಸ್ಯರು, ಬಂಧು-ಮಿತ್ರರು, ಪ್ರಶಂಸಕರು ಹಾಗೂ ಬೆಂಬಲಿಗರ ಪ್ರತಿ ನನ್ನ ಸಂವೇದನೆಗಳು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಳೆದ ಆಗಸ್ಟ್ 10 ರಂದು ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಜಾರಿಗೊಳಿಸಲಾದ ಮೆಡಿಕಲ್ ಬುಲೆಟಿನ್ ನಲ್ಲಿ ಅವರು ಆಳವಾದ ಕೊಮಾ ಸ್ಥಿತಿಗೆ ತಲುಪಿದ್ದು, ಅವರನ್ನು ವೆಂಟಿಲೆಟರ್ ಮೇಲೆ ಇರಿಸಲಾಗಿದೆ ಎನ್ನಲಾಗಿತ್ತು.
ಅವರ ನಿಧನದ ಬಳಿಕ ಟ್ವೀಟ್ ಮೂಲಕ ಮಾಹಿತಿ ನೀಡಿದ್ದ ಅವರ ಪುತ್ರ ಅಭಿಜೀತ್ ಮುಖರ್ಜೀ, " ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಕೆಲ ಸಮಯದ ಹಿಂದೆ ನಮ್ಮನ್ನು ಅಗಲಿದ್ದಾರೆ ಎಂದು ತುಂಬಿದ ಹೃದಯದಿಂದ ಸೂಚಿಸಲು ನನಗೆ ಅತೀವ ದುಃಖವಾಗುತ್ತಿದೆ. ಆರ್. ಆರ್ ಆಸ್ಪತ್ರೆಯ ವೈದ್ಯರ ಅತ್ಯುತ್ತಮ ಪ್ರಯತ್ನ ಹಾಗೂ ಇಡೀ ದೇಶದ ಜನತೆಯ ಪ್ರಾರ್ಥನೆಗಳಿಗೆ ನಾನು ಕೈಮುಗಿದು ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದಿದ್ದರು.